ಕಾರು ಪಲ್ಟಿಯಾಗಿ ಯುವಕ ಸಾವು

30.05 hulsoor photo (02)
Published on

ಹುಲಸೂರು: ಬೇಲೂರ-ಮುಸ್ತಾಪುರ ಮಧ್ಯೆ ಶುಕ್ರವಾರ ಮಧ್ಯರಾತ್ರಿ ಸಂಭವಿಸಿದ ಕಾರು ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿದ್ದು, ಒಬ್ಬನಿಗೆ ಸಣ್ಣಪುಟ್ಟ ಗಾಯಗಳಾವೆ. ಮುಚಳಂಬ ಗ್ರಾಮದ ಸಚಿನ್ ಹಂಚೆ (22) ಮೃತಪಟ್ಟವ. ಬೇಲೂರದಲ್ಲಿರುವ ಸಂಬಂಧಿಕರ ಮನೆಗೆ ಹೋಗಿ ಬರುವಾಗ ಅಪಘಾತ ಸಂಭವಿಸಿದೆ. ಪಿಎಸ್ಐ ಗೌತಮ ಗುತ್ತೇದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net