ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ಸಾವು

accident-15
Published on

ಮೈಸೂರು: ನಗರದ ಉತ್ತನಹಳ್ಳಿ ರಿಂಗ್‌ರಸ್ತೆಯಲ್ಲಿ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೆ.ಆರ್.ಮೊಹಲ್ಲಾದ ಹುಲ್ಲಿನ ಬೀದಿ ನಿವಾಸಿ ಸೈಯದ್ ಆರೀಫ್(70) ಮೃತರು. ಅಂಗಡಿಗಳಿಗೆ ಬೀಡಿ ವಿತರಣೆ ಮಾಡುತ್ತಿದ್ದ ಇವರು, ಸ್ಕೂಟರ್‌ನಲ್ಲಿ ಲಲಿತಾದ್ರಿಪುರದ ಕಡೆಯಿಂದ ಉತ್ತನಹಳ್ಳಿ ಕಡೆಗೆ ರಿಂಗ್‌ರಸ್ತೆಯಲ್ಲಿ ಹೋಗುತ್ತಿದ್ದರು.

ಶ್ರೀ ಶನಿದೇವರ ದೇವಸ್ಥಾನದ ಕ್ರಾಸ್ ಬಳಿ ಹಿಂಬದಿಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು, ಸ್ಕೂಟರ್ ಸಹಿತ ಸೈಯದ್ ಅವರನ್ನೂ ಎಳೆದೊಯ್ದಿದೆ.

ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net