ಕಾರು ಡಿಕ್ಕಿಯಾಗಿ ಗೂಡ್ಸ್ ಆಟೋ ಚಾಲಕ ಸಾವು

accident raichur
Published on

ಮೈಸೂರು: ಮೈಸೂರು ತಾಲೂಕಿನ ಕಳಸ್ತವಾಡಿ ಬಳಿ ಕಾರು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಗೂಡ್ಸ್ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೈಸೂರು ತಾಲೂಕಿನ ಕುಮಾರಬೀಡು ನಿವಾಸಿ ಕುಮಾರ್(48) ಮೃತರು. ಗೂಡ್ಸ್ ಆಟೋ ಚಾಲಕರಾಗಿದ್ದ ಅವರು, ಪಂಕ್ಚರ್ ಆಗಿದ್ದ ಲಾರಿಗೆ ಟಯರ್ ನೀಡಲು ರಸ್ತೆ ದಾಟುತ್ತಿದ್ದರು.

ಈ ಸಂದರ್ಭದಲ್ಲಿ ಕಾರು ಡಿಕ್ಕಿ ಹೊಡೆದಿದೆ. ಎನ್.ಆರ್. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net