ಕಾರು ಡಿಕ್ಕಿ: ಬೈಕ್‌ನಲ್ಲಿದ್ದ ಒಂದೇ ಕುಟುಂಬದ ನಾಲ್ವರಿಗೆ ಗಂಭೀರ ಗಾಯ

web sgr
Published on

ಸಾಗರ: ಸಾಗರದ ಇಕ್ಕೇರಿ-ಆವಿನಹಳ್ಳಿ ರಸ್ತೆಯ ಸುಪ್ರೀಂ ರೈಸ್‌ಮಿಲ್ ಸಮೀಪ ಗುರುವಾರ ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ನಾಲ್ವರಿಗೆ ಗಂಭೀರ ಗಾಯವಾಗಿದೆ. ಆವಿನಹಳ್ಳಿ ಕಡೆ ಬೈಕ್‌ನಲ್ಲಿ ಬರುತ್ತಿದ್ದ ಕೆಳದಿ ರಸ್ತೆಯ ನಿವಾಸಿಗಳಾದ ಒಂದೇ ಕುಟುಂಬದ ದಾನಿಸ್, ಖೈರುನ್ನಿಸಾ, ತೌಫಿಕ್ ಮತ್ತು ಫಿದಾ ಎಂಬುವವರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಗಾಯವಾಗಿದ್ದು, ಅವರನ್ನು ಉಪವಿಭಾಗೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಕಾರು ಚಾಲಕ ಶಿವಮೊಗ್ಗದ ಬಸವೇಶ್ವರ ನಗರದ ನಾಗರಾಜ್ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net