ಕಾರು ಡಿಕ್ಕಿ: ಬೈಕ್ ಸವಾರನ ಸ್ಥಿತಿ ಗಂಭೀರ

ಕಾರು ಡಿಕ್ಕಿ: ಬೈಕ್ ಸವಾರನ ಸ್ಥಿತಿ ಗಂಭೀರ
Published on

ಹಾಸನ: ಮದ್ಯ ಸೇವನೆ ಮಾಡಿ ಅತೀ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಬಿ.ಎಂ.ರಸ್ತೆಯ ಜಿಲ್ಲಾ ಕಾರಾಗೃಹದ ಸಮೀಪ ನಡೆದಿದೆ. ನಗರದ ಫೈಜಾನ್ (24) ಗಾಯಗೊಂಡ ಯುವಕ.
ಮಂಗಳವಾರ ರಾತ್ರಿ ಜಿಲ್ಲಾ ಕಾರಾಗೃಹದ ಎದುರಿಗಿರುವ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಹೊರ ಬರುತ್ತಿದ್ದಂತೆ ಸಂತೇಪೇಟೆ ಕಡೆಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ 25 ಮೀಟರ್‌ಗೂ ಹೆಚ್ಚು ದೂರು ಹಾರಿಕೊಂಡು ಹೋಗಿ ಬಿದ್ದಿದ್ದಾರೆ. ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅಪಘಾತ ನಡೆಸುತ್ತಿದ್ದಂತೆ ಚಾಲಕ ಸ್ಥಳದಲ್ಲಿಯೇ ಕಾರು ಬಿಟ್ಟು ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಯುವಕನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೈಜಾನ್ ಇತ್ತಿಚೇಗಷ್ಟೇ ಮೈಸೂರಿನಲ್ಲಿ ಎರೋನಾಟಿಕ್ ಇಂಜಿನೀಯರ್ ಮುಗಿಸಿ ಕೆಲಸ ಮಾಡುತ್ತಿದ್ದ. ಈ ಬಗ್ಗೆ ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net