ಕಾರು ಡಿಕ್ಕಿ-ಬೈಕ್‌ ಸವಾರ ಸ್ಥಳದಲ್ಲೇ ಸಾವು

IMG-20230107-WA0003
Published on

ಸಿದ್ದಾಪುರ: ಹಾಳದಕಟ್ಟಾ ಸೊರಬಾ ರಸ್ತೆಯಲ್ಲಿ ಕಾರು-ಬೈಕ್‌ ನಡುವೆ ಅಪಘಾತ ಸಂಭವಿಸಿ, ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಶಿರಳಗಿ ಸಮೀಪದ ಹೊಸಗದ್ದೆಯ ರಮೇಶ ಗಜಾನನ ಹೆಗಡೆ(52) ಮೃತರು. ಮರಮಟ್ಟುಗಳ ಕೆಲಸ ಮಾಡುತ್ತಿದ್ದ ಅವರು ಬೈಕ್‌ ನಲ್ಲಿ ತೆರಳುವಾಗ ಕಾರು ಡಿಕ್ಕಿಯಾಗಿ ಪಲ್ಟಿಯಾಗಿದೆ. ಕಾರಿನ ಚಾಲಕ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಅಂಡಗಿಯ ದೃರ್ಶನ್‌ ಚಿಕ್ಕಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಆತನ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net