

ದೇವರಹಿಪ್ಪರಗಿ: ಪಟ್ಟಣದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಗುರುವಾರ ಸಂಭವಿಸಿದ ಕಾರು ಅಪಘಾತದಲ್ಲಿ ತಾಯಿ ಮತ್ತು ಮಗ ಮೃತಪಟ್ಟಿದ್ದಾರೆ. ಅಂಬರೀಷ ಮಲಕಣ್ಣ ಆರಿಗೇರಿ (25) ಸ್ಥಳದಲ್ಲಿಯೇ ಮೃತಪಟ್ಟರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ತಾಯಿ ಇಂದಿರಾಬಾಯಿ ಮಲಕಣ್ಣ ಆರಿಗೇರಿ (53) ಮೃತಪಟ್ಟ ದುರ್ದೈವಿಗಳು.
ಮೂಲತಃ ಅಜಲಪುರ ಪಟ್ಟಣದವರಾದ ಹಾರೂಗೇರಿ ಕುಟುಂಬ ಶಿಕ್ಷಣಕ್ಕಾಗಿ ದೇವರಹಿಪ್ಪರಗಿಯಲ್ಲಿ ಮನೆ ಮಾಡಿಕೊಂಡಿದ್ದು ವಿಜಯಪುರ ಖಾಸಗಿ ಆಸ್ಪತ್ರೆಗೆ ತನ್ನ ಅಜ್ಜಿಯ ಕಣ್ಣಿನ ಚಿಕಿತ್ಸೆಗಾಗಿ ಅಂಬರೀಶ ತನ್ನ ತಾಯಿ, ಅಣ್ಣನೊಂದಿಗೆ ಪ್ರಯಾಣ ಬೆಳೆಸಿದ್ದರು.
ಪಟ್ಟಣ ಬಿಟ್ಟು ಕೆಲವೇ ಕಿ.ಮೀ. ಅಂತರದಲ್ಲಿ ವಿಜಯಪುರ ರಸ್ತೆಯಲ್ಲಿರುವ ಇಟ್ಟಿಗೆ ಭಟ್ಟಿ ಕಾರಿಗೆ ಅಡ್ಡ ಬಂದ ಕುದುರೆ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಕಾರು ಉರುಳಿ ಬಿದ್ದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.