ಕಾರು ಅಪಘಾತ ವ್ಯಕ್ತಿ ಸಾವು

accident-15
Published on

ಚನ್ನರಾಯಪಟ್ಟಣ : ಕಾರಿನ ಚಾಲಕನ ನಿರ್ಲಕ್ಷೃದಿಂದ ಅಪಘಾತದಿಂದ ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಹಿರೀಸಾವೆ ಸಮೀಪ ನಡೆದಿದೆ.
ಶಿಕಾರಿಪುರ ತಾಲ್ಲೂಕು ದೊಡ್ಡಕೇರಿ ಗ್ರಾಮದ ಸುನೀಲ್ (30) ಮೃತರು. ಸೆಕೆಂಡ್ ಹ್ಯಾಂಡ್ ಕಾರು ಖರೀದಿಗಾಗಿ ಫೆ. 23 ರಂದು ಸ್ನೇಹಿತ ಶರತ್‌ಕುಮಾರ್ ಎಂಬುವವರ ಜೊತೆಗೆ ಸುನೀಲ್ ಚನ್ನರಾಯಪಟ್ಟಣಕ್ಕೆ ಬಂದಿದ್ದರು. ಅದೇ ದಿನ ರಾತ್ರಿ ಬೆಂಗಳೂರಿಗೆ ತೆರಳಲು ಬಸ್ ವಿಚಾರಿಸುತ್ತಿದ್ದಾಗ ಕಾರು ಚಾಲಕನೊಬ್ಬ ಬಂದು ತಾನು ಸಹ ಬೆಂಗಳೂರಿಗೆ ಹೋಗುತ್ತಿರುವುದಾಗಿ ಇಬ್ಬರನ್ನು ಕೂರಿಸಿಕೊಂಡು ಹೋಗುತ್ತಿದ್ದ. ರಾತ್ರಿ 1.30ರ ವೇಳೆ ಸುನೀಲ್ ಮೂತ್ರ ವಿಸರ್ಜನೆಗಾಗಿ ಕಾರು ನಿಲ್ಲಿಸುವಂತೆ ತಿಳಿಸಿದ್ದು, ಸುನೀಲ್ ಕಾರು ಇಳಿದು ರಸ್ತೆ ದಾಡುತ್ತಿದ್ದ ವೇಳೆ ಚನ್ನರಾಯಪಟ್ಟಣ ಕಡೆಯಿಂದ ಬಂದ ಇಂಡಿಕಾ ಕಾರು ಡಿಕ್ಕಿ ಹೊಡಿದೆ. ಅಪಘಾತದ ರಭಸಕ್ಕೆ ಸುನೀಲ್ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಡಿಕ್ಕಿ ಮಾಡಿದ ಕಾರು ಚಾಲಕ ಅದೇ ವೇಗದಲ್ಲಿ ಹೋಗಿ ಪರಾರಿಯಾಗಿದ್ದಾನೆ. ಸುನೀಲ್ ಅವರನ್ನು ಕೂಡಲೇ ಎ.ಸಿ.ಗಿರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲಿ ಅವರು ಸಾವನ್ನಪ್ಪಿದರು. ಹಿರೀಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net