

ಮೈಸೂರು: ಹಣ ನೀಡುವಂತೆ ಕಾರಾಗೃಹದಿಂದಲೇ ರೌಡಿಶೀಟರ್ ಮಂಜೇಶ್ ಹಾಗೂ ಅವರ ಸ್ನೇಹಿತರಾದ ಚಂದ್ರಶೇಖರ್, ಅನಿಲ್, ಸುರೇಶ್ ಎಂಬುವರು ಬೆದರಿಕೆ ಹಾಕಿದ್ದಾರೆಂದು ರಿಯಲ್ ಎಸ್ಟೇಟ್ ಉದ್ಯಮಿ ರಾಜೇಂದ್ರ ರಾವ್ ದೂರು ನೀಡಿದ್ದು, ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಂದ್ರಶೇಖರ್ ಹಾಗೂ ನನ್ನ ನಡುವೆ ರಿಯಲ್ ಎಸ್ಟೇಟ್ ವ್ಯವಹಾರ ಇದೆ. 40 ಲಕ್ಷ ರೂ. ಕೊಡಬೇಕೆಂಬ ಕಾರಣಕ್ಕೆ ಚಂದ್ರಶೇಖರ್ ಯುವಕರನ್ನು ಕರೆತಂದು ಬೆದರಿಕೆ ಹಾಕಿದ್ದಾರೆ. ಅಲ್ಲದೆ ಜೈಲಿನಲ್ಲಿರುವ ಮಂಜೇಶ್ ನನ್ನ ಮೊಬೈಲ್‌ಗೆ ಕರೆ ಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.