

ಚಿತ್ರದುರ್ಗ: ಪೋಕ್ಸೋ ಪ್ರಕರಣದ ಆರೋಪ ಎದುರಿಸುತ್ತಿರುವ ಶಿವಮೂರ್ತಿ ಮುರುಘಾ ಶರಣರಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಈ ಹಿಂದೆ ಹೈಕೋರ್ಟ್ ನೀಡಿದ್ದ ಜಾಮೀನು ಷರತ್ತಿನ ಆದೇಶದನ್ವಯ ನಗರದ ಜಿಲ್ಲಾ ಕಾರಾಗೃಹದಿಂದ ಬಿಡುಗಡೆ ಮಾಡಲು ಸೋಮವಾರ ನಿರ್ದೇಶಿಸಿತು.
ಕೋರ್ಟ್‌ನಿಂದ ಸೂಕ್ತ ನಿರ್ದೇಶನ ಬರುತ್ತಿದ್ದಂತೆ ಬಿಡುಗಡೆ ಪ್ರಕ್ರಿಯೆ ಪೂರೈಸಿದ ಜೈಲು ಅಧಿಕಾರಿಗಳು,ಶರಣರನ್ನು ಸಂಜೆ 4.15 ಹೊತ್ತಿಗೆ ಕಾರಾಗೃಹದಿಂದ ಬಿಡುಗಡೆ ಮಾಡಿದರು. ಜೈಲಿನಿಂದ ಹೊರ ಬರುತ್ತಿದ್ದಂತೆ ಶರಣರು ನೇರ ದಾವಣಗೆರೆ ಶಿವಯೋಗಿ ಆಶ್ರಮಕ್ಕೆ ತೆರಳಿದರು.
ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸಿ,ಮುಖ್ಯ ಸಾಕ್ಷಿದಾರರ ವಿಚಾರಣೆ, ಕ್ರಾಸ್ ಎಕ್ಸಾಮಿನೇಷನ್ ಪೂ ರ್ಣಗೊಳಿಸಲು ನಾಲ್ಕು ತಿಂಗಳು ಗಡುವು ನೀಡಿತ್ತು. ಅದರಂತೆ ಸಂತ್ರಸ್ತ ಬಾಲಕಿಯರು ಒಳಗೊಂಡ ಮೊದಲ ಪ್ರಕರಣದಲ್ಲಿ 13,ಎರಡ ನೇ ಪ್ರಕರಣದಲ್ಲಿ 12 ಮುಖ್ಯಸಾಕ್ಷಿದಾರರ ವಿಚಾರಣೆ ಸೋಮವಾರಕ್ಕೆ ಬಹುತೇಕ ಪೂರ್ಣಗೊಂಡಿತು.
ಈ ಹಿನ್ನೆಲೆಯಲ್ಲಿ ಕಾರಾಗೃಹದಿಂದ ಬಿಡುಗಡೆಗೊಳಿಸಲು ಶರಣರ ಪರ ಹೈಕೋರ್ಟ್ ವಕೀಲ ಸಿ.ವಿ.ನಾಗೇಶ್ ಅವರು ಕೋರ್ಟಿಗೆ ಮನವಿ ಮಾಡಿದರು. ವಕೀಲರ ಮನವಿ ಆಲಿಸಿದ ನ್ಯಾಯಾಧೀಶ ಗಂಗಾಧರಪ್ಪ ಚನ್ನಬಸಪ್ಪ ಅಡಪದ ಅವರು,ಶರಣರನ್ನು ಕಾರಾಗೃಹ ದಿಂದ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿದರು. ಇನ್ನುಳಿದ ಸಾಕ್ಷಿಗಳ ವಿಚಾರಣೆ ಮುಂದುವರಿಯಲಿದೆ.
ಹಿನ್ನೆಲೆ:
ಮೊದಲ ಪೋಕ್ಸೋ ಪ್ರಕರಣದಲ್ಲಿ ಎ1 ಆರೋಪಿ ಶಿವಮೂರ್ತಿ ಶರಣರಿಗೆ ಹೈಕೋರ್ಟ್,2023ರ ನ.8ರಂದು ಜಾಮೀನು ನೀಡಿತ್ತು. ಆರೋಪಿ ಪ್ರಬಲರಾಗಿದ್ದು,ಸಾಕ್ಷೃನಾಶಪಡಿಸುವ,ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಜಾಮೀನು ಮಂಜೂರು ಪ್ರಶ್ನಿಸಿ ಸಂತ್ರಸ್ತೆ ನ್ಯಾ ಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಹೀಗಾಗಿ ಸುಪ್ರೀಂಕೋರ್ಟ್ ಮುಖ್ಯಸಾಕ್ಷಿ ವಿಚಾರಣೆ,ಕ್ರಾಸ್‌ಎಕ್ಸಾಮಿನೇಷನ್ ಪೂರ್ಣಗೊಳ್ಳುವವರೆಗೂ ನ್ಯಾಯಾಂಗ ವಶದಲ್ಲಿ ಶರ ಣರನ್ನು ಇರಿಸುವಂತೆ ಸೂಚಿಸಿತ್ತು. ಅದರಂತೆ 2024ರ ಏಪ್ರಿಲ್ 23ರಂದು ಪುನಾ ನ್ಯಾಯಾಲಯಕ್ಕೆ ಹಾಜರಾಗಿದ್ದ ಶರಣರು ನಂತರ ಕಾ ರಾಗೃಹ ಸೇರಿದ್ದರು.
ಸುಪ್ರೀಂಕೋರ್ಟ್ ನಿರ್ದೇಶನದನ್ವಯ ಚಿತ್ರದುರ್ಗ ಕೋರ್ಟ್‌ನಲ್ಲಿ ಮುಖ್ಯಸಾಕ್ಷಿಗಳ ವಿಚಾರಣೆ ಪೂರ್ಣಗೊಂಡ ಹಿನ್ನೆಲೆ,ಹೈ ಕೋರ್ಟ್‌ನ ಹಿಂದಿನ ಜಾಮೀನು ಆದೇಶ ಅನ್ವಯವಾಗಲಿದ್ದು,ಅದರಂತೆ ಬಿಡುಗಡೆಗೆ ಆದೇಶಿಸಿದೆ ಎಂದು ಶರಣರ ಪರ ವಕೀಲ ಕೆ.ಎನ್.ವಿಶ್ವನಾಥಯ್ಯ ತಿಳಿಸಿದರು.
ಹೈಕೋರ್ಟ್ ಆದೇಶದನ್ವಯ ಚಿತ್ರದುರ್ಗ ಪ್ರವೇಶಿಸಲು ಅನುಮತಿ ಇಲ್ಲ. ಹೀಗಾಗಿ ಅನುಮತಿ ನೀಡಲು ಕೋರಿ ಹೈಕೋರ್ಟಿಗೆ ಶರಣರ ಪರ ವಕೀಲರು ಮುಂಬರುವ ದಿನಗಳಲ್ಲಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಶರಣರು ಜೈಲಿನಿಂದ ಹೊರ ಬರುವ ವೇಳೆ ದಾವಣ ಗೆರೆ ವಿರಕ್ತ ಮಠದ ಡಾ.ಶ್ರೀಬಸವಪ್ರಭು ಶ್ರೀ,ಬಸವಾದಿತ್ಯ ದೇವರು,ಶರಣರ ಪರ ವಕೀಲರಾದ ಕೆ.ಎನ್.ವಿಶ್ವನಾಥಯ್ಯ,ಎಂ.ಉಮೇ ಶ್,ವಿಶ್ವನಾಥ್,ಪ್ರತಾಪ್‌ಜೋಗಿ ಹಾಗೂ,ಪರಮಶಿವಯ್ಯ,ಜೀತೇಂದ್ರಹುಲಿಕುಂಟೆ,ಆನಂದಪ್ಪ,ಕರಿಯಪ್ಪ,ಮೂರ್ತಿ,ಕುಂಚಿಗನಾಳ್ ಮ ಹಾಲಿಂಗಪ್ಪ,ಪೈ ಲ್ವಾನ್‌ತಿಪ್ಪೇಸ್ವಾಮಿ,ಶಫೀವುಲ್ಲಾ ಇತರರು ಇದ್ದರು.