

ಧಾರವಾಡ: ಕರೊನಾ ವೈರಸ್ ಹರಡುವಿಕೆ ತಡೆಯá-ವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿರುವ ಜನರ ಆರೋಗ್ಯದ ದೃಷ್ಟಿಯಿಂದ ನಗರದ ಕೇಂದ್ರ ಕಾರಾಗೃಹದ ಸಿಬ್ಬಂದಿ ಹಾಗೂ ಕೈದಿಗಳು ಮಾಸ್ಕ್ ತಯಾರಿಸಿದ್ದಾರೆ.
ಕೇಂದ್ರ ಕಾರಾಗೃಹದ ಸಿಬ್ಬಂದಿ ಹಾಗೂ 6 ಕೈದಿಗಳು ಸೇರಿ 10 ದಿನಗಳಲ್ಲಿ 4000 ಮಾಸ್ಕ್ ಸಿದ್ಧಪಡಿಸಿದ್ದಾರೆ. ಈ ಮಾಸ್ಕ್ ಗಳನ್ನು ಪೊಲೀಸ್ ಸಿಬ್ಬಂದಿ, ಬ್ಯಾಂಕ್, ಅಂಚೆ ಕಚೇರಿ, ಕೇಂದ್ರ ಕಾರಾಗೃಹ ಅಧೀನದಲ್ಲಿನ ಜೈಲು ಸಿಬ್ಬಂದಿ ಸೇರಿ ಇತರ ಕಡೆಗಳಲ್ಲಿ ವಿತರಣೆ ಮಾಡಲಿದ್ದಾರೆ. ಎಲ್ಲ ಮಾಸ್ಕ್ಗಳನ್ನು ಸ್ವತಃ ಸಿಬ್ಬಂದಿ ಹಾಗೂ ಕೈದಿಗಳೇ ತಯಾರಿಸಿದ್ದಾರೆ. ಮುಂದಿನ ಮೂರು ದಿನಗಳಲ್ಲಿ 5000 ಮಾಸ್ಕ್ಗಳನ್ನು ತಯಾರಿಸುವ ಗುರಿ ಹೊಂದಲಾಗಿದೆ. ಅವುಗಳನ್ನು ಸಹ ಅಗತ್ಯ ಇರುವ ಕಡೆಗಳಲ್ಲಿ ವಿತರಣೆ ಮಾಡಲು ಯೋಚಿಸಲಾಗಿದೆ ಎಂದು ಜೈಲು ಅಧೀಕ್ಷಕಿ ಅನಿತಾ ಆರ್. ತಿಳಿಸಿದ್ದಾರೆ.