ಕಾರವಾರದಲ್ಲಿಲ್ಲ ನಾಲ್ಕು ಪಟ್ಟೆ ಹುಲಿ

12KWR3
Published on

ಕಾರವಾರ: ನಾಲ್ಕು ಪಟ್ಟೆ ಹುಲಿಗಳು ಸಮುದ್ರ ತಟದಿಂದ ಬೆಟ್ಟ ಹತ್ತಿ ಹೋಗುವ ಅಪರೂಪದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾರವಾರ ಅಸ್ನೋಟಿ ರೈಲ್ವೆ ನಿಲ್ದಾಣದ ಬಳಿ ಹುಲಿ ಓಡಾಡುತ್ತಿದೆ ಎಂದು ಹಲವರು ವಾಟ್ಸ್ ಆಪ್ ಗ್ರೂಪ್​ಗಳಿಗೆ ಹರಿಬಿಡುತ್ತಿದ್ದಾರೆ. ಆದರೆ, ಇದು ಕಾರವಾರ ವ್ಯಾಪ್ತಿಯದ್ದಲ್ಲ. ಜನ ಯಾರೂ ಆತಂಕಪಡುವ ಅಗತ್ಯವಿಲ್ಲ. ಎಲ್ಲಿದೋ ವಿಡಿಯೋಕ್ಕೆ ಜನ ಕಾರವಾರದ ಹೆಸರು ಸೇರಿಸಿ ಹರಿಬಿಡುತ್ತಿದ್ದಾರೆ ಎಂದು ಗೋಪಶಿಟ್ಟಾ ಆರ್​ಎಫ್​ಒ ರಾಘವೇಂದ್ರ ನಾಯ್ಕ ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net