ಕಾರವಾರದ ಪಿಎಸ್‌ಐ ಮಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಕುಸಿದು ಬಿದ್ದು ಸಾವು

2KWR-Venkatesh Harijana
Published on

ಕಾರವಾರ: ಇಲ್ಲಿನ ಎಸ್‌ಪಿ ಕಚೇರಿಯ ನಿಸ್ತಂತು ವಿಭಾಗದ ಪಿಎಸ್‌ಐ ವೆಂಕಟೇಶ ಹರಿಜನ(49)ಸೋಮವಾರ ನಿಧನ ಹೊಂದಿದರು. ಕೆಲ ದಿನಗಳಿಂದ ಇದ್ದ ಅನಾರೋಗ್ಯದ ಕಾರಣ ತಪಾಸಣೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳುತ್ತಿದ್ದರು.ಸೋಮವಾರ ಬೆಳಗ್ಗೆ ಕಾರವಾರದಿಂದ ಹೊರಟು ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿಳಿದು ಕುಳಿತಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಪುತ್ರಿ ಇದ್ದಾರೆ.
ಮೂಲತಃ ದಾಂಡೇಲಿಯ ವೆಂಕಟೇಶ ಅವರು 1998 ರಲ್ಲಿ ಪೊಲೀಸ್ ಇಲಾಖೆ ಸೇರಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲೇ ಕಾರ್ಯನಿರ್ವಹಿಸಿದ್ದರು. ಮೂರು ವರ್ಷಗಳ ಹಿಂದೆ ಪಿಎಸ್‌ಐ ಹುದ್ದೆಗೆ ಭಡ್ತಿ ಹೊಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net