ಕಾರವಾರ ಶಹರ ಠಾಣೆ ಸೀಲ್ ಡೌನ್

carona logo
Published on

ಕಾರವಾರ: ಜಿಲ್ಲೆಯಲ್ಲಿ ಸೋಮವಾರ 89 ಜನರಿಗೆ ಹೊಸದಾಗಿ ಕರೊನಾ ಕಾಣಿಸಿಕೊಂಡಿದ್ದು, 39 ಜನ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ. ಹಳಿಯಾಳದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

ಕಾರವಾರದಲ್ಲಿ 21, ಅಂಕೋಲಾದಲ್ಲಿ 1, ಕುಮಟಾದಲ್ಲಿ 8, ಮುಂಡಗೋಡ ಹಾಗೂ ಹೊನ್ನಾವರದಲ್ಲಿ ತಲಾ 9, ಭಟ್ಕಳದಲ್ಲಿ 5, ಶಿರಸಿಯಲ್ಲಿ 2, ಹಳಿಯಾಳ ಹಾಗೂ ದಾಂಡೇಲಿಯಲ್ಲಿ 34 ಜನರಲ್ಲಿ ಕೋವಿಡ್ ಇರುವುದು ಕಂಡುಬಂದಿದೆ.

ಕಾರವಾರದಲ್ಲಿ 7, ಹೊನ್ನಾವರದಲ್ಲಿ 2, ಶಿರಸಿಯಲ್ಲಿ 4, ಯಲ್ಲಾಪುರದಲ್ಲಿ 3, ಮುಂಡಗೋಡಿನಲ್ಲಿ 9, ಹಳಿಯಾಳ ಹಾಗೂ ದಾಂಡೇಲಿಯಲ್ಲಿ 14 ಜನ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 3368 ಕ್ಕೆ ತಲುಪಿದ್ದು, 2420 ಜನ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ. 915 ಸಕ್ರಿಯ ಪ್ರಕರಣಗಳಿವೆ. ಒಟ್ಟಾರೆ ಸಾವಿನ ಸಂಖ್ಯೆ 33 ಕ್ಕೆ ಏರಿಕೆಯಾಗಿದೆ.

ಆರು ಸಿಬ್ಬಂದಿಗೆ ಸೋಂಕು: ಇಲ್ಲಿನ ಶಹರ ಠಾಣೆಯ ಆರು ಸಿಬ್ಬಂದಿಗೆ ಕರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಠಾಣೆಯನ್ನು ಸೀಲ್​ಡೌನ್ ಮಾಡಲಾಗಿದೆ. ಒಬ್ಬ ಎಎಸ್​ಐ, ಒಬ್ಬ ಹೆಡ್ ಕಾನ್​ಸ್ಟೇಬಲ್, ಒಬ್ಬ ಮಹಿಳಾ ಪಿಸಿ, ಮೂರು ಜನ ಕಾನ್​ಸ್ಟೇಬಲ್​ಗಳಿಗೆ ರೋಗ ಕಾಣಿಸಿಕೊಂಡಿದೆ. ಈ ಹಿಂದೆ ಒಬ್ಬ ಮಹಿಳಾ ಪಿಸಿ ಹಾಗೂ ಮಹಿಳಾ ಹೋಂಗಾರ್ಡ್ ಸಿಬ್ಬಂದಿಗೆ ಕರೊನಾ ಕಾಣಿಸಿಕೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net