ಕಾರವಾರ ನೌಕಾನೆಲೆಗೆ ವೈಸ್ ಅಡ್ಮಿರಲ್ ಭೇಟಿ

14KWR1A
Published on

ಕಾರವಾರ: ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಪಶ್ಚಿಮ ನೌಕಾ ವಲಯ ಮುಖ್ಯಸ್ಥ ವೈಸ್ ಅಡ್ಮಿರಲ್ ಆರ್.ಹರಿಕುಮಾರ್ ಶನಿವಾರ ಹಾಗೂ ಭಾನುವಾರ ಕಾರವಾರ ನೌಕಾನೆಲೆಗೆ ಭೇಟಿ ನೀಡಿ ಪರಿಶೀಲಿಸಿದರು.

ಫೆ. 28 ರಂದು ಅವರು ಪಶ್ಚಿಮ ನೌಕಾ ವಲಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಕಾರವಾರಕ್ಕೆ ಭೇಟಿ ನೀಡಿದ್ದರು. ಕರ್ನಾಟಕ ನೌಕಾ ಪ್ರದೇಶ ಮುಖ್ಯಸ್ಥ ರಿಯರ್ ಅಡ್ಮಿರಲ್ ಮಹೇಶ ಸಿಂಗ್ ಅವರು ಆರ್. ಹರಿಕುಮಾರ್ ಅವರನ್ನು ಸ್ವಾಗತಿಸಿ, ಗೌರವ ವಂದನೆ ಸಲ್ಲಿಸಿದರು.

ಹರಿಕುಮಾರ್ ಅವರು ಕಾರವಾರ ನೌಕಾನೆಲೆಯ ಅಧಿಕಾರಿಗಳು, ನಾವಿಕರು, ಸೈನಿಕರು ಹಾಗೂ ಸಿವಿಲಿಯನ್ ಸಿಬ್ಬಂದಿಯ ಜತೆ ಪ್ರತ್ಯೇಕವಾಗಿ ಸಂವಾದ ನಡೆಸಿದರು. ಕಾರವಾರದಲ್ಲಿ ಈಗಿರುವ ಮೂಲ ಸೌಕರ್ಯಗಳು, ಕಾರ್ಯಾಚರಣೆಯ ಸಿದ್ಧತೆ, ಸೀಬರ್ಡ್ ನೌಕಾ ಯೋಜನೆಯ ಎರಡನೇ ಹಂತದ ಕಾಮಗಾರಿ, (2ಎ) ಬಗ್ಗೆ ಹರಿಕುಮಾರ್ ಅವರಿಗೆ ವಿವರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net