ಕಾರವಾರ ಗಾಳಿ ಸುದ್ದಿ ನಂಬಿ ರಸ್ತೆ ಬಂದ್

11KWR2
Published on

ಕಾರವಾರ: ಕರೊನಾ ಕ್ವಾರಂಟೈನ್ ಸೆಂಟರ್ ಮಾಡುತ್ತಾರೆ ಎಂಬ ಸುದ್ದಿ ನಂಬಿ ಊರಿನ ದಾರಿಯನ್ನೇ ಬಂದ್ ಮಾಡಿದ ಘಟನೆ ತಾಲೂಕಿನ ತೋಡೂರು ಕಾಲನಿಯಲ್ಲಿ ಸೋಮವಾರ ಬೆಳಕಿಗೆ ಬಂದಿದೆ.

ತೋಡೂರು ಕಾಲನಿಯ ಕುವೆಂಪು ಮಾದರಿ ಶಾಲೆಯಲ್ಲಿ ಕರೊನಾ ಶಂಕಿತರ ಕ್ವಾರಂಟೈನ್ ಕೇಂದ್ರ ತೆರೆಯಲಾಗುವುದು ಎಂಬ ಸುದ್ದಿ ಹರಡಿತ್ತು. ಇದರಿಂದ ಹೆದರಿದ ತೋಡೂರು ಕಾಲನಿ ಗ್ರಾಮಸ್ಥರು ಭಾನುವಾರ ರಾತ್ರೋ ರಾತ್ರಿ ಊರಿನ ಮೂರು ರಸ್ತೆಗಳಿಗೆ ಮರ, ಮುಳ್ಳು, ಕಲ್ಲುಗಳನ್ನಿಟ್ಟು ವಾಹನ ಸಂಚಾರ ಬಂದ್ ಮಾಡಿದ್ದಾರೆ.
‘ಕ್ವಾರಂಟೈನ್ ಕೇಂದ್ರ ತೆರೆಯುವ ಬಗ್ಗೆ ಗ್ರಾಪಂಗೂ ಯಾವುದೇ ಮಾಹಿತಿ ಇಲ್ಲ. ಇಲ್ಲಿ ಕ್ವಾರಂಟೈನ್ ಮಾಡುವ ಸಾಧ್ಯತೆ ಕಡಿಮೆ. ಇದರಿಂದ ಜನ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ತಿಳಿ ಹೇಳಿದ್ದೇವೆ’ ಎಂದು ಗ್ರಾಪಂ ಉಪಾಧ್ಯಕ್ಷ ಚಂದ್ರಕಾಂತ ಚಿಂಚಣಕರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net