ಕಾರಲ್ಲಿ ಯುವಕನ ಅಪಹರಣ

kidnap
Published on

ಕಾಸರಗೋಡು: ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಪುನ್ನಾರದಲ್ಲಿ ಯುವಕನನ್ನು ಕಾರಿನಲ್ಲಿ ಅಪಹರಿಸಿದ ಪ್ರಕರಣಕ್ಕೆ ಸಂಬಂದಿಸಿ ಚೆಂಗಳ ಸಿಟಿಸನ್ ನಗರ ನಿವಾಸಿ ತಮ್ಮು ಸೇರಿದಂತೆ ಮೂರು ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಚಟ್ಟಂಚಾಲ್ ಪುನ್ನಾರ ನಿವಾಸಿ ಕೆ. ಹರ್ಷಾದ್ ಎಂಬುವರು ಪುನ್ನಾರದ ಹೋಟೆಲ್ ಸನಿಹ ನಿಂತಿದ್ದ ಸಂದರ್ಭ ಕಾರಲ್ಲಿ ಆಗಮಿಸಿದ ತಂಡ ಅವರನ್ನು ಬಲವಂತವಾಗಿ ಕಾರಿಗೇರಿಸಿ ಅಪಹರಿಸಿತ್ತು. ಹಣದ ವ್ಯವಹಾರಕ್ಕೆ ಸಂಬಂಧಿಸಿ ಅಪಹರಿಸಲಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net