ಕಾರಂಜಾ ಪರಿಹಾರ ಪ್ರಣಾಳಿಕೆಯಲ್ಲಿ ಸೇರಿಸಿ

karnja memo
Published on

ಬೀದರ್: ಎಕರೆಗೆ 20 ಲಕ್ಷ ರೂ. ಪರಿಹಾರ ನೀಡಿಕೆ ಸೇರಿ ಕಾರಂಜಾ ಜಲಾಶಯದ ಸಂತ್ರಸ್ತರ ವಿವಿಧ ಬೇಡಿಕೆಗಳನ್ನು ರಾಜಕೀಯ ಪಕ್ಷಗಳು ಚುನಾವಣೆ ಪ್ರಣಾಳಿಕೆಯಲ್ಲಿ ಸೇರಿಸಬೇಕು ಎಂದು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.

ನಗರದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಮನವಿ ಸಲ್ಲಿಸಿದ ಸಮಿತಿ ಪ್ರಮುಖರು, ಕಾರಂಜಾ ಯೋಜನೆಗಾಗಿ 5 ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳು ತಮ್ಮ ಜಮೀನು ನೀಡಿದ್ದಾರೆ. ಆದರೆ ಸರ್ಕಾರ ಕೊಟ್ಟ ಪರಿಹಾರ ಎಕರೆಗೆ ಕೇವಲ ಮೂರ್ನಾಲ್ಕು ಸಾವಿರ. ಪರಿಹಾರದಲ್ಲಿ ಆದಂಥ ಅನ್ಯಾಯ ಸರಿಪಡಿಸಲು ಸತತ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಪ್ರಣಾಳಿಕೆಯಲ್ಲಿ ಸೇರಿಸಿ ಸರ್ಕಾರ ಬಂದ ತಕ್ಷಣ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳಿಗೆ ಮನವಿಪತ್ರ ಸಲ್ಲಿಸಿ ಸಂತ್ರಸ್ತರ ಪರಿಹಾರ ಬೇಡಿಕೆ ಸೇರಿ ಜಿಲ್ಲೆಯ ಆಯಾ ಕ್ಷೇತ್ರಗಳ ರಚನಾತ್ಮಕ ಅಭಿವೃದ್ಧಿ ಬಗ್ಗೆ ಪಕ್ಷದ ಘೋಷಣಾ ಪತ್ರದಲ್ಲಿ ಸೇರಿಸಿ ಮತಯಾಚನೆ ಮಾಡುವಂತೆ ಕೋರಲಾಗಿದೆ. ಸಂತ್ರಸ್ತರಿಗೆ ನ್ಯಾಯ ನೀಡಲು ಪಕ್ಷಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಹೋಚಕನಳ್ಳಿ, ಮುುಖಂಡರಾದ ರಾಜಪ್ಪ ಕಮಲಪುರ, ಶಂಕ್ರಪ್ಪ ನಾರಾ, ಕೇದಾರನಾಥ ಪಾಟೀಲ್, ಮಹೇಶ ಕಮಲಪುರ, ಭೋಜರಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net