ಕಾರಂಜಾ ಜಲಾಶಯ ಅರ್ಧ ಭರ್ತಿ

WhatsApp Image 2020-09-19 at 9.12.59 PM
Published on

ಬೀದರ್: ಕಳೆದ ಐದು ದಿನಗಳ ಧಾರಾಕಾರ ಮಳೆಯಿಂದ ಕಾರಂಜಾ ಜಲಾಶಯಕ್ಕೂ ನೀರಿನ ಒಳಹರಿವು ಹೆಚ್ಚಾಗಿದ್ದು, ಜಲಾಶಯ ಅರ್ಧದಷ್ಟು ಭರ್ತಿ ಯಾಗಿದೆ.

ಕಾರಂಜಾ ಜಲಾಶಯ 7.69 ಟಿಎಂಸಿ ಸಾಮಥ್ರ್ಯ ಹೊಂದಿದೆ. ಮಳೆಗಾಲ ಮುಗಿಯಲು ಇನ್ನೂ ಎರಡು ವಾರ ಬಾಕಿ ಇದ್ದರೂ ಜಲಾಶಯದಲ್ಲಿ 1.60 ಟಿಎಂಸಿ ನೀರು ಸಹ ಇರಲಿಲ್ಲ. ಆದರೆ ಇತ್ತೀಚಿನ ಮಳೆಯಿಂದಾಗಿ ನೀರಿನ ಸಾಮಥ್ರ್ಯದಿಂದ ಶನಿವಾರ ರಾತ್ರಿ 9ರ ವೇಳೆಗೆ 3.588 ಟಿಎಂಸಿಗೆ ಹೆಚ್ಚಾಗಿದೆ. ಕಳೆದ ನಾಲ್ಕೈದು ದಿನಗಳಲ್ಲಿ 2 ಟಿಎಂಸಿಯಷ್ಟು ನೀರು ಹರಿದುಬಂದಿದೆ.

ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಇನ್ನೂ ಮಳೆ ಬರುತ್ತಿರುವ ಕಾರಣ ನೀರಿನ ಸಂಗ್ರಹ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಬೀದರ್ ನಗರ, ಭಾಲ್ಕಿ, ಹುಮನಾಬಾದ್, ಚಿಟಗುಪ್ಪ ಪಟ್ಟಣಕ್ಕೆ ಕುಡಿಯುವ ನೀರಿಗೆ ಈ ಜಲಾಶಯ ಮೂಲಾಧರವಾಗಿದೆ. ಪ್ರತಿ ವರ್ಷ ಕುಡಿಯುವ ನೀರಿಗಾಗಿ 0.75 ಟಿಎಂಸಿಯಷ್ಟು ನೀರು ಬೇಕಾಗುತ್ತಿದೆ. 2016ರ ಸೆಪ್ಟೆಂಬರ್ನಲ್ಲಿ ಜಲಾಶಯ ಭರ್ತಿ ಆಗಿತ್ತು. ನಂತರ ತುಂಬಿಲ್ಲ. ಜಲಾಶಯಕ್ಕೆ ಸದ್ಯ 4629 ಕ್ಯೂಸೆಕ್ ನೀರಿನ ಒಳಹರಿವು ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net