

ಗೌರಿಬಿದನೂರು : ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ರಾಜ್ಯ ರೈತಸಂಘ ಮತ್ತು ಹಸಿರುಸೇನೆ ಮಂಗಳವಾರ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಂ.ರಾಜಣ್ಣ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಕಾಯ್ದೆ ತಿದ್ದುಪಡಿ ರೈತನಿಗೆ ಮರಣ ಶಾಸನವಾಗಲಿದೆ, ಭೂಗಳ್ಳರಿಗೆ ವರದಾನವಾಗಿದೆ. ರಾಜ್ಯ ಸರ್ಕಾರದ 79(ಎ),79(99) ಕಾಯ್ದೆ ಮೂಲಕ ರೈತರ ಭೂಮಿ ಕಬಳಿಸಲು ಹುನ್ನಾರ ನಡೆಸಿದೆ, ಭೂಮಿ ಮಾರಿಕೊಂಡು ರೈತರು ಕೂಲಿಯಾಗಿ ಬದುಕಬೇಕಾಗುತ್ತದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಅರ್.ಲಕ್ಷ್ಮೀನಾರಾಯಣ್ ಆತಂಕ ವ್ಯಕ್ತಪಡಿಸಿದರು.
ತಾಲೂಕು ಆಧ್ಯಕ್ಷ ಗುಂಡಾಪುರ ಲೋಕೇಶ್‌ಗೌಡ, ಗೌರವಾಧ್ಯಕ್ಷ ಮುದ್ದರಂಗಪ್ಪ, ಪ್ರಧಾನ ಕಾರ್ಯದರ್ಶಿ ಸನತ್‌ಕುಮಾರ್, ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಉಪಾಧ್ಯಕ್ಷ ಎನ್.ವೆಂಕಟೇಶ್, ಗ್ರಾಪಂ ಮಾಜಿ ಸದಸ್ಯ ಹಿರೇಬಿದನೂರು ರಾಜಣ್ಣ ಇತರರಿದ್ದರು.