ಕಾಯ್ದೆ ಜಾರಿಯಿಂದ ರೈತರು ಬೀದಿಪಾಲು

28 rtl 01
Published on

ರಟ್ಟಿಹಳ್ಳಿ: ಬಂದ್ ಬೆಂಬಲಿಸಿ ರೈತ ಸಂಘ ಹಾಗೂ ಹಸಿರು ಸೇನೆ, ಉತ್ತರ ಕರ್ನಾಟಕ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಪರಿವರ್ತನಾ ಸಂಘದಿಂದ ಪಟ್ಟಣದ ಹೊಸ ಬಸ್ ನಿಲ್ದಾಣ ವೃತ್ತದ ಸಮೀಪ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕೆ. ಗುರಬಸವರಾಜ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು. ರೈತ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ದೀವಗಿಹಳ್ಳಿ ಮಾತನಾಡಿ, ಸರ್ಕಾರ ವಿವಿಧ ಕಾಯ್ದೆ ಜಾರಿಗೊಳಿಸುವ ಮೂಲಕ ರೈತರನ್ನು ಬೀದಿಪಾಲು ಮಾಡುತ್ತಿದೆ ಎಂದು ಆರೋಪಿದರು. ಎಪಿಎಂಸಿ ಮಾಜಿ ಅಧ್ಯಕ್ಷ ವಸಂತ ದ್ಯಾವಕ್ಕಳವರ ಮಾತನಾಡಿದರು. ಪಿ.ಡಿ. ಬಸನಗೌಡ್ರ, ಯಲ್ಲಪ್ಪ ಮರಾಠೆ, ಇರ್ಫಾನ್ ಜಡದಿ, ಕರಿಯಪ್ಪ ಕೊರವರ, ಲೋಹಿತ ಪೂಜಾರ, ಪರಮೇಶಪ್ಪ ಕಟ್ಟೇಕಾರ, ವೀರಪ್ಪ ಮುದಿಯಪ್ಪನವರ, ಮಂಜಪ್ಪ ಮುದಿಯಪ್ಪನವರ, ಹನುಮಂತಪ್ಪ ನಾಯಕ, ಮಾಂತಯ್ಯ ಪಾಟೀಲ, ರಮೇಶ ಭೀಮಪ್ಪನವರ, ಮುಕ್ಕರಸಾಬ್ ಕಲಂಕಲ, ವೀರಪ್ಪ ಸರಶೆಟ್ಟರ್, ಸಮೀವುಲ್ಲಾ ಜಮಖಾನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net