ಕಾಯಿಲೆ ಗುಣಪಡಿಸುವ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ : ಪ್ರತಿವರ್ಷ ವಿಶೇಷ ಬ್ರಹ್ಮೋತ್ಸವ, ಆಂಧ್ರ, ತಮಿಳುನಾಡಿನಿಂದಲೂ ಹರಿದುಬರುವ ಭಕ್ತಸಾಗರ

1
Published on

ವೈ.ಶಿವಶಂಕರ್​, ಕೆಜಿಎಫ್

ಹತ್ತಾರು ಗ್ರಾಮಗಳಲ್ಲಿ ಹರಡಿದ್ದ ದಡಾರ ಕಾಯಿಲೆಯು ಇದ್ದಕ್ಕಿದ್ದಂತೆ ಶಮನಗೊಳ್ಳುವಲ್ಲಿ ನಗರದ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ಅನುಗ್ರಹ ಜನಜನಿತವಾಗಿದೆ.

ಕೆಜಿಎ್​ ನಗರದ ರಾರ್ಬಟ್​ಸನ್​ಪೇಟೆಯಲ್ಲಿರುವ ಪ್ರಸಿದ್ಧ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇಗುಲವು ಮುಜರಾಯಿ ಇಲಾಖೆಯ ಸಿ ದರ್ಜೆಗೆ ಒಳಪಟ್ಟಿದ್ದು, ಹಲವು ವರ್ಷಗಳ ಇತಿಹಾಸ ಮತ್ತು ರೋಚಕತೆಗೆ ಸಾಯಾಗಿದೆ.

ಇತಿಹಾಸ: ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ರಾರ್ಬಟ್​ಸನ್​ ಎಂಬ ವ್ಯಕ್ತಿಯು ಕೆಎಫ್ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದನು. ಆದ್ದರಿಂದ ಈ ಪ್ರದೇಶಕ್ಕೆ ರಾರ್ಬಟ್​ಸನ್​ಪೇಟೆ ಎಂದು ನಾಮಾಂಕಿತವಾಯಿತು. ಬ್ರಿಟಿಷ್​ ಕಾಲಾವಧಿಯಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಯಾನಕವಾಗಿ ಜನರನ್ನು ಕಾಡುತ್ತಿದ್ದ ಸಾಂಕ್ರಾಮಿಕ ಕಾಯಿಲೆಯಾದ ದಡಾರ ಕಾಣಿಸಿಕೊಂಡು ಹಲವು ಗ್ರಾಮಸ್ಥರು ಸಾಯತೊಡಗಿದ್ದರು. ನಗರದ ಗೀತಾ ರಸ್ತೆಯಲ್ಲಿ ವಾಸವಿದ್ದ ಭಾಸ್ಕರ್​ನಾಯ್ಡು ಎಂಬುವವರು ಮನೆಯ ಮುಂಭಾಗದಲ್ಲಿ ಖಾಲಿ ಇದ್ದ ಜಾಗವನ್ನು ಮೈಸೂರು ಮಹಾರಾಜರಿಗೆ ಒಪ್ಪಿಸಿ ಇಲ್ಲಿ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವರ ಪೂಜೆ ನೆರವೇರಿಸಿ ಹರಕೆ ಹೊತ್ತಿದ್ದರಿಂದ ಸಾಂಕ್ರಾಮಿಕ ಕಾಯಿಲೆಗಳು ತಗ್ಗಿತ್ತು ಎಂಬ ನಂಬಿಕೆಯಿದೆ. ಈ ಹಿನ್ನಲೆಯಲ್ಲಿ ಊರಿನ ಮುಖಂಡರಿಂದ ಚಿಕ್ಕ ದೇವಾಲಯ ನಿರ್ಮಿಸಿ ಬ್ರಹ್ಮೋತ್ಸವ ಆಯೋಜಿಸುತ್ತ ಬರಲಾಗುತ್ತಿದೆ.

ವಿಶೇಷ ಬ್ರಹ್ಮೋತ್ಸವ: ಪ್ರತಿವರ್ಷ ಫೆಬ್ರವರಿಯಲ್ಲಿ 13 ದಿನಗಳ ಕಾಲ ಬ್ರಹ್ಮೋತ್ಸವ ಮತ್ತು ಹಲವು ಉತ್ಸವಗಳನ್ನು ಏರ್ಪಡಿಸಲಾಗುತ್ತದೆ. ಚಿಕ್ಕತಿರುಪತಿಯ ತಿರುಮಲ ದೇವಾಲಯದ ಆಗಮಿಕರೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಉತ್ಸವಕ್ಕೆ ಜಿಲ್ಲೆ ಸೇರಿ ನೆರೆಯ ಆಂಧ್ರ, ತಮಿಳುನಾಡಿನಿಂದಲೂ ಅಪಾರ ಭಕ್ತರು ಆಗಮಿಸುವುದು ವಾಡಿಕೆ.

ಕಲ್ಯಾಣಿ ಜೀಣೋರ್ದ್ಧಾರ: ದೇವಾಲಯ ಹಿಂಭಾಗದಲ್ಲಿರುವ ಪುರಾತನ ಕಲ್ಯಾಣಿಯನ್ನು ಇತ್ತೀಚೆಗೆ ಜೀಣೋರ್ದ್ಧಾರ ಮಾಡಲಾಗಿದೆ. ಇದರಿಂದ ಪ್ರತಿ ವರ್ಷ ಫೆಬ್ರವರಿಯಲ್ಲಿ ನಡೆಯುವ ಜಾತ್ರೆ ವೇಳೆ ಕಲ್ಯಾಣಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.

ದೇವಾಲಯದಿಂದ ಸರ್ಕಾರಕ್ಕೆ ಆದಾಯವಿದ್ದರೂ ಸಹ ಸರ್ಕಾರ ದೇವಾಲಯ ಅಭಿವೃದ್ಧಿಗೆ ಮುಂದಾಗುತ್ತಿಲ್ಲ. ಇಲ್ಲಿನ ಹಣದಲ್ಲಿ ಇತರ ದೇವಾಲಯಗಳ ಅಭಿವೃದ್ಧಿ ಮಾಡಲಾಗುತ್ತಿರುವುದು ಬೇಸರ ತರಿಸಿದೆ. ರಾಜಗೋಪುರ ನಿಮಾರ್ಣಕ್ಕೆ ಮುಂದಾಗಿದ್ದ ಭಕ್ತರಿಗೂ ಅನುಮತಿ ನೀಡಿಲ್ಲ. ಇದು ಅಧಿಕಾರಿಗಳ ನಡೆ ಬಗ್ಗೆ ಅಸಮಾಧಾನ ಉಂಟುಮಾಡಿದೆ. ಹಿಂದು ದೇವಾಲಯಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು. ಶ್ರೀಧರ್​ರಾವ್​ಶಿಂಧೆ, ವಿಹಿಪ ಅಧ್ಯಕ್ಷ ಶ್ರಿ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯವು ಸಿ ದರ್ಜೆ ದೇವಾಲಯವಾಗಿದ್ದು, ಭಕ್ತರು ನೀಡುವ ಹಣದಲ್ಲಿ ದೇವಾಲಯದಲ್ಲಿ ನೌಕರಿ ಮಾಡುವವರಿಗೆ ವೇತನ ನೀಡಲಾಗುತ್ತಿದೆ. ಹುಂಡಿ ಹಣ ಸರ್ಕಾರಕ್ಕೆ ನೀಡಿದರೂ ಸರ್ಕಾರ ಮಾತ್ರ ದೇವಾಲಯ ಅಭಿವೃದ್ಧಿಗೆ ಸಹಕಾರ ನೀಡುತ್ತಿಲ್ಲ. ಶೇಷಬಾಬು ದೇವಾಲಯ ಭಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net