ಕಾಯಕದಿಂದ ಮೆಚ್ಚುಗೆ ಗಳಿಸಿದ ಮಹಾನ್ ಶರಣ

14blk1
ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮೇದಾರ ಕೇತಯ್ಯ ಜಯಂತಿ ಆಚರಿಸಲಾಯಿತು. ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಮಹಾಲಿಂಗ ಸ್ವಾಮೀಜಿ , ನಾಗನ್ನಾಥ ಮೇಘಾ, ಬಸವರಾಜ ಚಂದಾನೋರ, ಪ್ರಿಯಾಂಕಾ, ಶಂಕರ ಚಂದಾನೋರ, ಶ್ರೀಧರ ಚಂದಾನೋರ, ಅನಿಲಕುಮಾರ ಚಂದಾನೋರ ಇತರರಿದ್ದರು.
Published on

ಭಾಲ್ಕಿ: ಹನ್ನೆರಡನೇ ಶತಮಾನದ ಬಸವಾದಿ ಶರಣರಲ್ಲಿ ಮೇದಾರ ಕೇತಯ್ಯ ಶರಣರು ತಮ್ಮ ಕಾಯಕ ತತ್ವದಿಂದ ಮೆಚ್ಚುಗೆ ಗಳಿಸಿದರು ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದ್ದ ಶರಣ ಮೇದಾರ ಕೇತಯ್ಯ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಕಲ್ಯಾಣದ ಅನುಭವ ಮಂಟಪದಲ್ಲಿ ಶರಣ ಕೇತಯ್ಯ ಅವರು ಬಸವಣ್ಣನವರ ಅಚ್ಚುಮೆಚ್ಚಿನವರಾಗಿದ್ದರು. ಬಸವಾದಿ ಶರಣರು ಕೇತಯ್ಯನ ಕಾಯಕ ನಿಷ್ಠೆಯನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಮೇದಾರ ಕೇತಯ್ಯ ಶರಣರು ಬಸವಣ್ಣನವರ ಕಾರ್ಯಕ್ಕೆ ಪ್ರಭಾವಿತರಾಗಿ ಅವರನ್ನು ಗುರುವಾಗಿ ಸ್ವೀಕರಿಸಿದರು. ಬಸವಣ್ಣನವರ ಪ್ರಭಾವದಿಂದ ಗುರು-ಲಿಂಗ-ಜಂಗಮದಲ್ಲೇ ತನ್ನ ನಿಜಸುಖವನ್ನು ಕಂಡವರು. ಭಕ್ತರಾಗಿ ಶರಣರಾಗಿ ಕಾಯಕದಲ್ಲೇ ಕೈಲಾಸವನ್ನು ಕಂಡಿದ್ದಾರೆ. ಶರಣರ ತತ್ವಗಳಾದ ದಯೆ, ಕರುಣೆ, ಕಾಯಕ, ದಾಸೋಹವನ್ನು ಅನುಷ್ಠಾನ ತಂದವರು. ಅಂತಹ ಶರಣ ಮೇದಾರ ಕೇತಯ್ಯನವರ ಆದರ್ಶ ಎಲ್ಲರಿಗೂ ಪ್ರೇರಣೆಯಾಗಬೇಕು ಎಂದು ತಿಳಿಸಿದರು.

ಶ್ರೀ ಮಹಾಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಶಿವಬಸವ ದೇವರು ಅನುಭಾವ ನೀಡಿದರು. ಸಮಾಜದ ಮುಖಂಡ ನಾಗನ್ನಾಥ ಮೇಘಾ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಅಧ್ಯಕ್ಷ ಬಸವರಾಜ ಚಂದಾನೋರ, ಶಂಕರ ಚಂದಾನೋರ, ಶ್ರೀಧರ ಚಂದಾನೋರ, ಅನಿಲಕುಮಾರ ಚಂದಾನೋರ, ಸಚಿನ ಪೂಜಾರಿ, ಸಿದ್ದು ವಾಗ್ಮಾರೆ, ವಿಶಾಲ ಪಳಸೆ, ಶರಣು ತೆಲಗಾಣೆ ಇತರರಿದ್ದರು.

ಪ್ರಿಯಾಂಕಾ ಸಾವಂತ ವಚನ ಗಾಯನ ನಡೆಸಿಕೊಟ್ಟರು. ದೀಪಕ ಠಮಕೆ ನಿರೂಪಣೆ ಮಾಡಿದರು. ಶಾಮಲಾ ವೈಜಿನಾಥ ಮೇತ್ರೆ ಕಾರ್ಯಕ್ರಮದ ಭಕ್ತಿ ದಾಸೋಹ ವಹಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net