ಕಾಯಕದಲ್ಲಿ ಅಧ್ಯಾತ್ಮ ಕಂಡಿದ್ದ ಸಿದ್ಧರಾಮರು- ಜಿಲ್ಲಾಧಿಕಾರಿ ಶಿವಾನಂದ ಕಾಪಶಿ

SI.jpg
Published on

ದಾವಣಗೆರೆ: ಶಿವಯೋಗಿ ಸಿದ್ದರಾಮರು ಬಸವಣ್ಣ, ಅಲ್ಲಮಪ್ರಭು ಕಾಲದ ಮಹಾನ್ ಪವಾಡ ಪುರುಷರಾಗಿದ್ದು, 12ನೇ ಶತಮಾನದಲ್ಲೇ ಕಾಯಕದ ಮೂಲಕ ಆಧ್ಯಾತ್ಮ ಕಂಡುಕೊಂಡಿದ್ದರು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.

ಜಿಲ್ಲಾಡಳಿತ ಭವನ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಭೋವಿ ಸಮಾಜದ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

ಲೌಕಿಕತೆಯಿಂದ ಅಲೌಕಿಕತೆಯತ್ತ, ಮುಗ್ಧ್ದತೆಯಿಂದ ಲೋಕ ಕಲ್ಯಾಣಕ್ಕಾಗಿ ಜೀವ ತೆತ್ತ್ತವರು ಸಿದ್ದರಾಮರು. ಅವರ ಆದರ್ಶಗಳು ಇಂದಿನ ಪೀಳಿಗೆಗೆ ಆದರ್ಶವಾಗಬೇಕು ಎಂದು ಹೇಳಿದರು.

ಫ.ಗು.ಹಳಕಟ್ಟಿಯವರು ಸಿದ್ದರಾಮೇಶ್ವರರು ಹಾಗೂ ಶಿವಶರಣರ ವಚನಗಳನ್ನು ಸಂಗ್ರಹಿಸಿದ್ದಾರೆ. ಇವರನ್ನು ಸೊನ್ನಲ್ಲಿಗೆ ಸಿದ್ದ ರಾಮೇಶ್ವರರು ಎಂದೂ ಕರೆಯುತ್ತಾರೆ. ಆ ಶತಮಾನದಲ್ಲೇ ಸಾವಿರಾರು ಕೆರೆಕಟ್ಟೆಗಳನ್ನು ನಿರ್ಮಿಸಿದ್ದಾರೆ. ವಚನ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಜಿಪಂ ಸಿಇಒ ಡಾ. ಎ.ಚನ್ನಪ್ಪ, ಪಾಲಿಕೆ ಮೇಯರ್ ಜಯಮ್ಮ ಆರ್ ಗೋಪಿನಾಯ್ಕ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಎನ್. ಲೋಕೇಶ್, ಎಸ್ಪಿ ಸಿ.ಬಿ,ರಿಷ್ಯಂತ್, ಕನ್ನಡ ಮತ್ತು ಸಂಸಕ್ಕತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಮತ್ತು ಡಿ.ಬಸವರಾಜ್ ಹಾಗೂ ಭೋವಿ ಸಮಾಜದ ಮುಖಂಡರಿದ್ದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net