ಕಾಯಕ ನಿಷ್ಠೆಯಿಂದ ಬದುಕು ನಂದನವನ

16bk1
Published on

ಬಸವಕಲ್ಯಾಣ: ವಿಜ್ಞಾನದ ಜತೆಗೆ ಸುಜ್ಞಾನ, ಸದ್ಭಕ್ತಿ, ಪರೋಪಕಾರ ಗುಣ ಬದುಕಿನಲ್ಲಿ ಅಳವಡಿಸಿಕೊಂಡು ಕಾಯಕ ನಿಷ್ಠೆಯಿಂದ ಬದುಕಿದರೆ ಜೀವನ ನಂದನವನ ಆಗುತ್ತದೆ ಎಂದು ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಹೇಳಿದರು.

ಶ್ರಾವಣ ಮಾಸ ಪೂರ್ತಿ ಗದಲೇಗಾಂವ ಗ್ರಾಮದಿಂದ ಹಾರಕೂಡ ಶ್ರೀಮಠದವರಿಗೆ ಪಾದಯಾತ್ರೆ ಮಾಡಿ ನಿತ್ಯದರ್ಶನ ಪಡೆದ ಭಕ್ತರು ಶನಿವಾರ ಸಲ್ಲಿಸಿದ ತುಲಾಭಾರ ಸೇವೆ ಸ್ವೀಕರಿಸಿ ಮಾತನಾಡಿ, ಗುರುವು ಅಜ್ಞಾನ ಹೋಗಲಾಡಿಸಿ ಸುವಿಚಾರದ ಸುಜ್ಞಾನಾಮೃತ ಭಕ್ತನ ಮನದಾಳದಲ್ಲಿ ತುಂಬಿ, ಆತನನ್ನು ಭವ ಬಂಧನದಿಂದ ಪಾರು ಮಾಡುತ್ತಾನೆ ಎಂದರು.

ಭುವನೇಶ್ವರಿ ಎಸ್. ಪಾಟೀಲ ಮಾತನಾಡಿದರು. ಕಾಶಪ್ಪ ದೇಗಾಂವ ಗದಲೇಗಾಂವ, ನಾಗಣ್ಣ ಪಾಟೀಲ್, ಮಹಾಂತಪ್ಪ ಸಿರಗಾಪುರ, ಪಾದಯಾತ್ರೆ ಗೈದ ಸೋಮಲಿಂಗ ಪಾಟೀಲ್, ವಿಜಯಕುಮಾರ ಪಾಟೀಲ್, ಮಹಾದೇವ ಪಾಟೀಲ್, ಕಲ್ಯಾಣರಾವ ಬೆಳಮಗಿ, ತುಕಾರಾಮರೆಡ್ಡಿ, ಪುಂಡಲಿಕ ಹೂಗಾರ, ದತ್ತು ಪಾಟೀಲ್, ಪರಮೇಶ್ವರ ಪಾಟೀಲ್, ಮಲ್ಲಿಕಾರ್ಜುನ ಕುಂಬಾರ, ಮಲ್ಲಿಕಾರ್ಜುನ ಅಕೋಜೆ, ಚನ್ನಾರೆಡ್ಡಿ ಎದಲೆ, ಶೋಭಾವತಿ ಪಾಟೀಲ್, ಶೋಭಾವತಿ ಪಾಟೀಲ್, ಜ್ಯೋತಿ ಪಾಟೀಲ್, ಸತ್ಯಕಲಾ ಪಾಟೀಲ್, ಭುವನೇಶ್ವರಿ ಪಾಟೀಲ್, ಪ್ರಿಯಾಂಕ ರೆಡ್ಡಿ, ಚನ್ನಮ್ಮ ಪಾಟೀಲ್, ಸುಮಾ ದೇವಬಾ, ಮುಗ್ಯಾಪ್ಪ ಬಾಳೆ, ನಾಗಮ್ಮ ಪಾಟೀಲ್, ಬಸಮ್ಮ ಪಾಟೀಲ್, ಲಕ್ಷಿ ಹೂಗಾರ, ಶರಣಮ್ಮ ಹೂಗಾರ, ಗುಂಡಮ್ಮ ಪಾಟೀಲ್, ನೀಲಮ್ಮ ಕುಂಬಾರ, ಸರಸ್ವತಿ ಪಾಟೀಲ್ ಇತರರಿದ್ದರು.
ವಿಠಲ ಹೂಗಾರ ನಿರೂಪಣೆ ಮಾಡಿದರು. ಕಾರ್ತಿಕ ಸ್ವಾಮಿ ಎಲ್ಲದಗುಂಡಿ ಹಾಗೂ ದಿಲೀಪಕುಮಾರ ದೇಸಾಯಿ ಗದಲೇಗಾಂವ ಪ್ರಾರ್ಥನೆ ಗೀತೆ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net