

ಬಸವನಬಾಗೇವಾಡಿ: ಶರಣ ನುಲಿಯ ಚಂದಯ್ಯನವರು ಕಾಯಕದಿಂದ ಬಂದ ಹಣದಿಂದ ಜಂಗಮ ದಾಸೋಹ ನಡೆಸುತ್ತಿದ್ದ ಒಬ್ಬ ಕಾಯಕ ಜೀವಿ ಎಂದು ತಿಮ್ಮಾಪುರ ಕಲ್ಯಾಣ ಆಶ್ರಮದ ಮಹಾಂತೇಶ್ವರ ಮಠದ ಪ್ರವಚನಕಾರರಾದ ಮುದುಗಲ್ಲದ ಮಹಾಂತ ಸ್ವಾಮೀಜಿ ಹೇಳಿದರು.
ಶುಕ್ರವಾರ ಸಂಜೆ ಪಟ್ಟಣದ ಬಸವೇಶ್ವರ ಆಂಗ್ಲಮಾಧ್ಯಮ ಶಾಲಾ ಆವರಣದ ಮೂಲನಂದೀಶ್ವರ ರಂಗಮಂದಿರದಲ್ಲಿ ಶ್ರಾವಣ ಮಾಸದ ಪ್ರವಚನ ವೇದಿಕೆಯಲ್ಲಿ ರಾಷ್ಟ್ರೀಯ ಬಸವಸೈನ್ಯ ಸಂಘಟನೆ ಹಮ್ಮಿಕೊಂಡಿದ್ದ ನುಲಿಯ ಚಂದಯ್ಯನವರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿ, 12ನೇ ಶತಮಾನದಲ್ಲಿ ಅಣ್ಣಬಸವಣ್ಣನವರ ಸಮಕಾಲಿನ ಬಸವಾದಿ ಶರಣರಲ್ಲಿ ಒಬ್ಬರಾದ ವಚನಕಾರ ನುಲಿಯ ಚಂದಯ್ಯನವರು ಕಲ್ಯಾಣದ ಹೊರ ವಲಯದಲ್ಲಿರುವ ಕೆರೆ ನೀರಿನ ದಂಡೆಯಲ್ಲಿ ಬೆಳೆದ ಸೊಗಸಾದ ಹುಲ್ಲು ತಂದು ಹಗ್ಗ ಹೊಸೆದು ಮಾರಿ ಅದರಲ್ಲಿ ಬಂದ ಹಣದಿಂದ ಜಂಗಮ ದಾಸೋಹ ನಡೆಸುತ್ತಿದ್ದರು. ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿರುವ ಮೌಢ್ಯತೆ ಮತ್ತು ಅಂಧಕಾರ ತಿದ್ದುವ ಕಾರ್ಯ ಮಾಡಿದರು ಎಂದರು.
ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಬಸವೇಶ್ವರ ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಎಂ.ಜಿ. ಆದಿಗೊಂಡ, ಬಸವರಾಜ ಹಾರಿವಾಳ, ಸಂಜು ಬಿರಾದಾರ, ಮುತ್ತು ಡಂಬಳ, ವಿಶ್ವನಾಥ ಹಿರೇಮಠ, ಈರನಗೌಡ ಪಾಟೀಲ, ಶ್ರೀಕಾಂತ ಪಟ್ಟಣಶೆಟ್ಟಿ, ಶ್ರೀಕಾಂತ ಕೊಟ್ರಶೆಟ್ಟಿ, ಜಂಟಿಗರಾಯ ಮಾಲಗಾರ, ಮನಾನ ಶಾಬಾದಿ, ಎಚ್.ಬಿ. ಬಾರಿಕಾಯಿ ಇತರರಿದ್ದರು.