

ಹಾಸನ: ಸೌತ್ ಆಫ್ರಿಕಾದ ಸನ್ ಸಿಟಿಯಲ್ಲಿ ಅ.4 ರಿಂದ ನಡೆಯಲಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪವರ್ ಲಿಫ್ಟಿಂಗ್ ಕ್ರೀಡೆಯಲ್ಲಿ ಬಾರತ ದೇಶವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದು, ಅಲ್ಲಿಗೆ ತೆರಳಲು ಲಕ್ಷಾಂತರ ರೂ ಹಣ ಖರ್ಚಾಗಲಿದ್ದು, ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಸಹಾಯಹಸ್ತ ನೀಡುವಂತೆ ಕ್ರೀಡಾಪಟು ಸಂತೋಷ್ ಶೆಟ್ಟಿ ಮನವಿ ಮಾಡಿದ್ದಾರೆ.
ಪ್ರತಿಷ್ಠಿತ ಗೇಮ್‌ಗಳಲ್ಲಿ ಒಂದಾಗಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಲು ನಾನು ಆಯ್ಕೆಯಾಗಿದ್ದೇನೆ. ಜಿಲ್ಲೆಯಿಂದ ಆಯ್ಕೆಯಾಗಿರುವ ಮೊದಲಿಗ ನಾನು. ಆದರೆ ಅಲ್ಲಿಗೆ ತೆರಳಲು ಲಕ್ಷಾಂತರ ರೂ ಹಣ ಖರ್ಚಾಗುತ್ತಿದ್ದು, ಆದರೆ ಸರ್ಕಾರದಿಂದ ಯಾವುದೇ ನೆರವು ಸಿಗುವುದಿಲ್ಲ. ನಮ್ಮ ಹಣದಿಂದ ಹೋಗಬೇಕು,ಅಷ್ಟೊಂದು ಹಣ ಧರಿಸಿಕೊಂಡು ಹೋಗಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಜಿಲ್ಲೆಯಲ್ಲಿರುವಂತಹ ದಾನಿಗಳು, ಸಂಘ-ಸಂಸ್ಥೆಗಳು ಹಾಗೂ ಜಿಲ್ಲಾಧಿಕಾರಿಗಳು ಸಹಾಯ ನೀಡುವಂತೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ.
ಪವರ್ ಲಿಫ್ಟಿಂಗ್‌ನ ಮಾಸ್ಟರ್ ವಿಭಾಗದಲ್ಲಿ 74 ಕೆಜಿ ಎತ್ತುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು, ನಾನು ಮೂಲತಃ ಉಡುಪಿ ಜಿಲ್ಲೆಯವನಾಗಿದ್ದು, ಹಾಸನದಲ್ಲಿ ಕಳೆದ 15 ವರ್ಷಗಳಿಂದ ನೆಲೆಸಿದ್ದೇನೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಬಾಡಿಬಿಲ್ಡಿಂಗ್ ಮಾಡುತ್ತಿದ್ದೆ ಅದಾದ ನಂತರ ಪವರ್ ಲಿಫ್ಟಿಂಗ್ ಎತ್ತುವ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ,ಅಂತರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಭಾಗವಹಿಸಿ ಪ್ರಶಸ್ತಿಗಳನ್ನು ತಂದು ಕೊಟ್ಟಿದ್ದೇನೆ. ಆದರೆ ಸರ್ಕಾರದಿಂದ ಯಾವುದೇ ನೆರವು ಸಿಕ್ಕಿರುವುದಿಲ್ಲ ಎಂದು ಅಳಲು ತೋಡಿಕೊಂಡರು.
ಕಳೆದ ಬಾರಿ ಏಷಿಯನ್ ಪವರ್ ಲಿಫ್ಟಿಂಗ್ ಕ್ರೀಡಾಕೂಟದಲ್ಲಿ ನಲ್ಲಿ 74 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದೇನೆ. ಅಲ್ಲದೆ ಐದು ಅಂತರಾಷ್ಟ್ರೀಯ ಮಟ್ಟದ ಸ್ಪರ್ಧಿಸಿ 4 ಬಾರಿ ಚಿನ್ನ ಗೆದ್ದಿದ್ದೇನೆ. ಇಷ್ಟೆಲ್ಲಾ ಸಾಧನೆ ಮಾಡಿದ್ದರು ಕೂಡ ಈಗ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ತೆರಳಲು ಹಣದ ಕೊರತೆ ಇದ್ದು, ಇದಕ್ಕೆ ಸಾರ್ವಜನಿಕರು ಮತ್ತು ದಾನಿಗಳು ಸಂಘ ಸಂಸ್ಥೆಗಳು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ನಮ್ಮ ಜಿಲ್ಲೆ ಮತ್ತು ರಾಜ್ಯದಲ್ಲಿ ಕ್ರೀಡೆಗೆ ಉತ್ತೇಜನ ನೀಡುವುದಿಲ್ಲ, ನಾವೇ ಸ್ವಂತ ಹಣ ಖರ್ಚು ಮಾಡಿಕೊಂಡು ಕ್ರೀಡಾಕೂಟದಲ್ಲಿ ಭಾಗವಹಿಸಬೇಕಾಗಿದೆ. ಕಳೆದ ಬಾರಿ ಏಷ್ಯನ್ ಕ್ರೀಡಾಕೂಟಕ್ಕೆ ತೆರಳುವ ಸಂದರ್ಭದಲ್ಲಿ ಕೂಡ ಕೆಲವರ ಸಹಕಾರದಿಂದ ಹೋಗಿ ಪದಕ ಗೆದ್ದುಕೊಂಡು ಬಂದಿದ್ದೇನೆ. ಆದರೆ ಈ ಬಾರಿ ಸೌತ್ ಆಫ್ರಿಕದಲ್ಲಿ ನಡೆಯುತ್ತಿರುವಂತಹ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ತೆರಳಲು ಸುಮಾರು 1,60,000 ಹಣ ಖರ್ಚಾಗುತ್ತದೆ ಆದ್ದರಿಂದ ದಾನಿಗಳು ಸಹಾಯ ಮಾಡುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮೋಹನ್ ಕುಮಾರ್ ಚರಣ್ ನಿರಂಜನ್ ಇತರರಿದ್ದರು
ಬ್ಯಾಂಕ್ ಅಕೌಂಟ್ ವಿವರ:-ಬ್ಯಾಂಕ್: ಬ್ಯಾಂಕ್ ಆಫ್ ಬರೋಡ ರವೀಂದ್ರನಗರ ಹಾಸನ
ಹೆಸರು :ಸಂತೋಷ್ ಶೆಟ್ಟಿ
ಅಕೌಂಟ್ ನಂಬರ್ :89560100000665
ಐ ಎಫ್ ಎಸ್ ಸಿ ಕೋಡ್ :BARBOVJHARA
ಗೂಗಲ್ ಪೇ ನಂಬರ್:9741848275