ಕಾಮಧೇನು ವೃದ್ಧಾಶ್ರಮದಲ್ಲಿ ಆಟೋಟ ಸ್ಪರ್ಧೆ

ಕಾಮಧೇನು ವೃದ್ಧಾಶ್ರಮದಲ್ಲಿ ಆಟೋಟ ಸ್ಪರ್ಧೆ
Published on

ಹಾಸನ: ನಗರದ ಹೊರವಲಯದಲ್ಲಿರುವ ಕಾಮಧೇನು ವೃದ್ಧಾಶ್ರಮಕ್ಕೆ ಇನ್ನರ್ ವೀಲ್ ಕ್ಲಬ್ ಆಫ್ ಹಾಸನ್ ಗೋಲ್ಡ್ ಸಂಸ್ಥೆಯ ಸದಸ್ಯರು ಗುರುವಾರ ಭೇಟಿ ನೀಡಿ ಅಲ್ಲಿರುವ ವೃದ್ಧರಿಗೆ ಜಾನಪದ ಹಾಡು ಹಾಗೂ ಕೆಲವೊಂದು ಆಟಗಳನ್ನು ಆಡಿಸಲಾಯಿತು.
ಕಾಮಧೇನು ವೃದ್ಧಾಶ್ರಮದಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅವರೊಂದಿಗೆ ಕ್ಲಬ್ಬಿನ ಸದಸ್ಯರು ಎಲ್ಲರೂ ಸೇರಿ ಭೋಜನವನ್ನು ಸವಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರೊಟೇರಿಯನ್ ಜಯರಾಮ್ ಅವರು ಕಾಮಧೇನು ಸಂಸ್ಥೆಯ ಬಗ್ಗೆ ತಿಳಿಸಿ, ಚಾರ್ಟರ್ ಪ್ರೆಸಿಡೆಂಟ್ ರತೀ ಅವರು ಡಾ.ಗುರುರಾಜ ಹೆಬ್ಬಾರ್ ಅವರನ್ನು ಸ್ಮರಿಸಿ ಸಮಾಜ ಸೇವೆಗೆ ಅವರು ಹಾಕಿಕೊಟ್ಟ ಅಡಿಪಾಯ ನಮಗೆ ಉತ್ತಮ ಕೆಲಸಗಳನ್ನು ಮಾಡಲು ಉತ್ತೇಜನವನ್ನು ನೀಡಿದೆ ಎಂದು ಹೇಳಿದರು.
ಇನ್ನರ್ ವೀಲ್ ಕ್ಲಬ್ ಹಾಸನ್ ಗೋಲ್ಡ್ ಅಧ್ಯಕ್ಷರಾದ ತನುಜಾ ಅವರು ಮಾತನಾಡಿ, ಆಶ್ರಮ ವಾಸಿಗಳ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ತಿಳಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಇನ್ನರ್ ವೀಲ್ ಕ್ಲಬ್‌ನ ಕಾರ್ಯದರ್ಶಿ ವನಿತಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net