

ಚಿಕ್ಕಮಗಳೂರು: ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್ ತನ್ನ ೨೦೨೪-೨೫ನೇ ಸಾಲಿನ ಆರ್ಥಿಕ ವರ್ಷದ ಸಿಎಸ್ ಆರ್ ನಿಧಿಯಡಿ ಕಾಮಧೇನು ಗೋ ಶಾಲೆಗೆ ನೀರಾವರಿ ಮೂಲಭೂತ ಸೌಕರ್ಯ ಕಲ್ಪಿಸಲು ೧.೫೦ ಲಕ್ಷ ರೂ. ಆರ್ಥಿಕ ನೆರವು ಕಲ್ಪಿಸಿದೆ ಎಂದು ಗೋ ಶಾಲೆಯ ಅಧ್ಯಕ್ಷ ನಾಗೇಶ್ ಅಂಗಿರಸ ತಿಳಿಸಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆನರಾ ಬ್ಯಾಂಕಿನ ಈ ನಿಲುವು ಪ್ರಧಾನ ಆರ್ಥಿಕತೆ ಹೊಂದಿದ ಭಾರತವನ್ನು ಆಳುವ ಸರ್ಕಾರಗಳಿಗೆ, ಕೃಷಿ ಮತ್ತು ಪಶು ವಿಶ್ವವಿದ್ಯಾನಿಲಯ, ಸಂಶೋಧನೆ, ಆರ್ಥಿಕ ಸಂಸ್ಥೆಗಳು, ಕೃಷಿ ವಿಜ್ಞಾನಿಗಳಿಗೆ ಹೊಸ ಆಯಾಮದ ಕಣ್ಣು ತೆರೆಸುವಂತೆ ಮಾಡಿದೆ ಎಂದು ಹೇಳಿದರು.
ಹಸಿರು ಕ್ರಾಂತಿ ಮತ್ತು ಕ್ಷೀರ ಕ್ರಾಂತಿಗೆ ಜೋತು ಬಿದ್ದ ಆಳುವ ವರ್ಗ ಮನುಷ್ಯ ಹಾಗೂ ಮಣ್ಣಿನ ಆರೋಗ್ಯ ಹಾಳು ಮಾಡುತ್ತಿವೆ. ವಿದೇಶಿ ಗೋ ತಳಿಗಳ ಹೇರಿಕೆಯಿಂದ ಸದೃಢ ದೇಸಿ ಗೋ ತಳಿಗಳ ನಾಶಕ್ಕೆ ಮುನ್ನಡಿ ಬರೆಯುತ್ತಿವೆ ಎಂದು ಹೇಳಿದರು.
ಖಸಾಯಿಕಖಾನೆ ತೆರೆಯಲು ಆರ್ಥಿಕ ನೆರವು ನೀಡುವ ಸರ್ಕಾರಿ ಸಂಸ್ಥೆಗಳು ಗೋ ಸಾಕಣೆಗೆ ನಬಾರ್ಡ್ ಮಾನದಂಡದAತೆ ನೀಡುತ್ತೇವೆ ಎನ್ನುತ್ತವೆ. ಈ ನಿಯಮಾವಳಿಯಂತೆ ಹಾಲು, ಬಿಲ್ಲಿಂಗ್, ಎಲ್ಲಾ ಹಸುಗಳ ಇನ್ಸೂರೆನ್ಸ್ ಮಾನದಂಡವಾಗಿದೆ. ಹಾಲನ್ನು ಹೊರತುಪಡಿಸಿ ಗೋ ಉತ್ಪನ್ನಗಳ ಯಾವುದೇ ಪ್ರಸ್ತಾಪವೆ ಸರ್ಕಾರ, ವಿಶ್ವವಿದ್ಯಾಲಯ ಹಾಗೂ ಸಂಬAಧಿತ ಇಲಾಖೆಗಳ ಬಳಿ ಇಲ್ಲ. ಇದರ ಮಧ್ಯೆ ಕೆನರಾ ಬ್ಯಾಂಕ್ ಗೋ ಶಾಲೆಗೆ ನೆರವು ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಮಧೇನು ಗೋ ಶಾಲೆಯ ಎ.ಜಿ.ಮಹೇಶ್ ಉಪಸ್ಥಿತರಿದ್ದರು.