ಕಾಮಗಾರಿಯಿಂದ ರಸ್ತೆ ಬದಲಾವಣೆ

Published on

ಬಳ್ಳಾರಿ : ನಗರದ ಸುಧಾ ಕ್ರಾಸ್ ವೃತ್ತ ಹತ್ತಿರದ ರೈಲ್ವೆ ಗೇಟ್ನ ರಸ್ತೆ ಬದಿ ಬೆಳೆದಿರುವ ಗಿಡ-ಮರ ಮತ್ತು ವಿದ್ಯುತ್‌ಕಂಬ ತೆರವುಗೊಳಿಸುವುದರಿಂದ ಜು.21 ಬೆಳಿಗ್ಗೆ 04 ಗಂಟೆಯಿಂದ ಸಂಜೆ 09 ಗಂಟೆಯವರೆಗೆ ವಾಹನಗಳ ಸಂಚಾರ ತಾತ್ಕಾಲಿಕವಾಗಿ ನಿರ್ಭಂಧಿಸಲಾಗಿದ್ದು, ಬದಲಿ ಮಾರ್ಗವಾಗಿ ಸಂಚರಿಸಬೇಕು ಡಿಸಿ ಪ್ರಶಾಂತ ಕುಮಾರ ಮಿಶ್ರಾ ತಿಳಿಸಿದ್ದಾರೆ.
ಬದಲಿ ಮಾರ್ಗ: ವಿಮ್ಸ್ ವೃತ್ತ, ಪೋಲಾ ಪ್ಯಾರಡೈಸ್ ಮುಖಾಂತರ ಮತ್ತು 2ನೇ ರೈಲ್ವೆ ಗೇಟ್ ರೇಡಿಯೋ ಪಾರ್ಕ್ದಿಂದ ಐಟಿಐ ಕಾಲೇಜು, ಎಂಆರ್‌ಕೆ ಫಂಕ್ಷನ್ ಹಾಲ್, ಆರ್‌ಟಿಒ ಕಚೇರಿ ರಸ್ತೆಯ ಮುಂಭಾಗದಿಂದ ಸುಧಾಕ್ರಾಸ್ (ಹೊಸಪೇಟೆ ರಸ್ತೆ) ಮಾರ್ಗವಾಗಿ ತಾತ್ಕಾಲಿಕವಾಗಿ ಸಂಚರಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net