ಕಾಮಗಾರಿ ಬೇಡಿಕೆ ಸಲ್ಲಿಸಲು ಅವಕಾಶ

2
Published on

ಬೈಲಹೊಂಗಲ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾಮಗಾರಿ ಬೇಡಿಕೆಗಳಿಗೆ ಡಿಜಿಟಲ್​ ಟಚ್​ ಉದ್ಯೋಗ ಖಾತ್ರಿ ನಡಿಗೆ ಸಬಲತೆಯಡೆಗೆ ಅಭಿಯಾನವನ್ನು ತಾಲೂಕಿನಾದ್ಯಂತ ಎಲ್ಲ ಗ್ರಾಪಂಗಳಲ್ಲಿ ಆರಂಭಿಸಲಾಗಿದೆ. ಗ್ರಾಪಂನಿಂದ ಮುಂಬರುವ ವರ್ಷದ 2025&26ನೇ ಸಾಲಿನ ಕ್ರಿಯಾಯೋಜನೆ ತಯಾರಿಸಲಾಗುತ್ತಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಉಳ್ಳಾಗಡ್ಡಿ ತಿಳಿಸಿದರು.

ಪಟ್ಟಣದ ತಾಪಂ ಕಾರ್ಯಾಲಯದಲ್ಲಿ ಯೋಜನೆಯ ಕ್ಯೂಆರ್​ ಕೋಡ್​ ಬಿಡುಗಡೆ ಮಾಡಿ ಮಾತನಾಡಿದರು. ಅಭಿಯಾನದಲ್ಲಿ ಸಾರ್ವಜನಿಕರು ಭಾಗವಹಿಸಿ ಕಾಮಗಾರಿಗಳಿಗೆ ಬೇಡಿಕೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಗ್ರಾಪಂ ಮಟ್ಟದ ಸಭೆಯಲ್ಲಿ ವೆಯಕ್ತಿಕ ಕಾಮಗಾರಿಗಳಿಗೆ ಬೇಡಿಕೆ ಸಲ್ಲಿಸಬಹುದು. ನರೇಗಾ ಯೋಜನೆಯಡಿ ಗ್ರಾಪಂನಿಂದ ಜಾನುವಾರುಗಳ ಶೆಡ್​, ಬಚ್ಚಲು ಗುಂಡಿ, ಎರೆಹುಳ ಗೊಬ್ಬರದ ತೊಟ್ಟಿ, ಕಷಿ ಹೊಂಡ, ಬದು ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲಾಗುತ್ತಿದೆ. ಬಹುವಾರ್ಷಿಕ ತೋಟಗಾರಿಕೆ ಬೆಳೆಗೆ ಧನ ಸಹಾಯ ನೀಡಲಾಗುವುದು. ಡಿಜಿಟಲ್​ ಟಚ್​ ನೀಡಿದೆ. ಬೆರಳ ತುದಿಯಲ್ಲೇ ಆನ್​ಲೈನ್​ ಮೂಲಕ ಕ್ಯೂಆರ್​ ಕೋಡ್​ ಅಥವಾ ಜಠಿಠಿಟಠ://ಞಜ್ಞ್ಟಛಿಜಚ.ಚ್ಟ್ಞಚಠಿಚಚ.ಜಟಡ.ಜ್ಞಿ/ ಲಿಂಕ್​ ಬಳಸಿ ಕಾಮಗಾರಿಗಳಿಗೆ ಬೇಡಿಕೆ ಸಲ್ಲಿಸಬಹುದು ಎಂದರು. ತಾಪಂ ಸಹಾಯಕ ನಿರ್ದೇಶಕ ವಿಜಯ ಪಾಟೀಲ, ರು ಬಿ.ಎನ್​., ಪ್ರಶಾಂತ ಹಿರೇಮಠ, ರಾಜಶೇಖರ ಕಡೆಮನಿ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net