

ಕುಡಚಿ: ಕಾಮಗಾರಿ ಎಷ್ಟು ಪ್ರಮಾಣದಲ್ಲಿ ಪೂರ್ಣಗೊಂಡಿವೆ ಎಂಬುದನ್ನು ಪರಿಶೀಲಿಸಿ ಬಿಲ್ ನೀಡಲಾಗುವುದು ಎಂದು ಜಿಲ್ಲಾಕಾರಿ ಡಾ.ನಿತೇಶ ಪಾಟೀಲ ಹೇಳಿದರು.
ಪಟ್ಟಣದ ಪುರಸಭೆ ವ್ಯಾಪ್ತಿಯ ನಗರೋತ್ಥಾನ ಯೋಜನೆಯಡಿ ಕೈಗೊಂಡ ಕಾಮಗಾರಿಗಳನ್ನು ಶುಕ್ರವಾರ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಎನ್‌ಎ ಆದ ಪ್ಲಾಟ್ ನಿವೇಶನಗಳು ಅೀಕೃತವಾಗಿರುವುದನ್ನು ಖಾತ್ರಿ ಮಾಡಿಕೊಂಡು ಬಳಿಕ ಪುರಸಭೆಯಲ್ಲಿ ನೋಂದಣಿ ಮಾಡಬೇಕು. ಅನಕೃತ ನಿವೇಶನ ನೋಂದಣಿ ಮಾಡಿದ್ದು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಕಾರಿ ಬಾಬಾಸಾಹೇಬ ಮಾನೆ ಅವರನ್ನು ಎಚ್ಚರಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದು, ಒಂದು ವಾರ್ಡ್‌ನಲ್ಲಿ ಮನೆ ಇದ್ದರೆ, ಮತ್ತೊಂದು ವಾರ್ಡ್‌ನಲ್ಲಿ ಮತದಾರನ ಹೆಸರು ಸೇರ್ಪಡೆಯಾಗುತ್ತಿದ್ದು, ಮತದಾರರಿಗೆ ತೊಂದರೆಯಾಗುತ್ತದೆ. ಅದನ್ನು ಸರಿಪಡಿಸಬೇಕು. ಬಿಎಲ್‌ಒಗಳನ್ನು ಮನೆಮನೆಗೆ ಕಳುಹಿಸಿ ಮತದಾರರ ಪಟ್ಟಿ ಪರಿಷ್ಕರಿಸಬೇಕು ಎಂದು ಸೂಚಿಸಿದರು. ಅಟಲ್‌ಜೀ ಜನಸ್ನೇಹಿ ಸಂಪರ್ಕ ಕೇಂದ್ರದಲ್ಲಿ ಜಮೀನು ವಾರಸಾ, ವಾಟ್ನಿ, ಪೋಡಿಗೆ ಅರ್ಜಿ ಸೇರಿ ವಿವಿಧ ಅರ್ಜಿ ಹಾಕುವ ವ್ಯವಸ್ಥೆ ತಕ್ಷಣ ಪ್ರಾರಂಭಿಸಬೇಕು. ಸಿಬ್ಬಂದಿ ಸರಿಯಾದ ಮಾಹಿತಿ ನೀಡಿ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ತಹಸೀಲ್ದಾರ್ ಸುರೇಶ್ ಮುಂಜೆ ಅವರಿಗೆ ಡಿಸಿ ನಿತೇಶ ಸೂಚಿಸಿದರು.
ಉಪತಹಸೀಲ್ದಾರ್ ಎಸ್.ಜಿ.ದೊಡಮನಿ, ಅಭಿಯಂತ ಎಸ್.ಆರ್.ಚೌಗಲಾ, ಗ್ರಾಮ ಲೆಕ್ಕಾಕಾರಿ ವೈ.ಕೆ.ಹೇಳವರ ಇತರರಿದ್ದರು.