ಕಾಮಗಾರಿ ನಿರ್ವಹಿಸದೆ ಬಿಲ್ ಎತ್ತುವಳಿ

24-08-Shiva-5
ಹೊಲದಲ್ಲಿ ಬದು ನಿರ್ಮಾಣದೆ ಬಿಲ್ ಎತ್ತುವಳಿ ಮಾಡಿದ ಅಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಕರ್ನಾಟಕ ಜಾಗೃತ ರೈತ ಸಂಘದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಲಿಂಗಣ್ಣ ಮಾಡಗಿರಿ, ಪದಾಕಾರಿಗಳಾದ ಅಬ್ರಾಹಂ ಪನ್ನೂರು, ರಾಜೇಂದ್ರ ಕಲ್ಲೂರು, ನರಸಪ್ಪ ಉಪ್ರಾಳ, ಕೃಷ್ಣಾ ಶಾಸಿ ಕ್ಯಾಂಪ್, ವಿಲ್ಸನ್ ಗೋಡಿಹಾಳ ಇದ್ದರು.
Published on

ರಾಯಚೂರು: ಮಾನ್ವಿ ಮತ್ತು ಸಿರವಾರ ತಾಲೂಕು ವ್ಯಾಪ್ತಿಯಲ್ಲಿ ಬದು ನಿರ್ಮಾಣ ಕಾಮಗಾರಿ ನಿರ್ವಹಿಸದೆ ಬಿಲ್ ಎತ್ತುವಳಿ ಮಾಡಿರುವ ಕೃಷಿ ಇಲಾಖೆ ಅಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ಜಾಗೃತ ರೈತ ಸಂಘದಿಂದ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಪ್ರಕರಣಕ್ಕೆ ಸಂಬಂಸಿದಂತೆ ತನಿಖೆ ನಡೆಸಿ ವರದಿ ನೀಡಲಾಗಿದ್ದರೂ ಅಕಾರಿಗಳ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಹೊಲಗಳಲ್ಲಿ ಬದು ನಿರ್ಮಾಣ ಮಾಡಲಾಗಿದೆ ಎಂದು ಬೋಗಸ್ ಬಿಲ್ ಎತ್ತುವಳಿ ಮಾಡಲಾಗಿದ್ದು, ಜಿ.ಪಂ.ನಿಂದ ನೇಮಕ ಮಾಡಲಾದ ಎಡಿಪಿಇ ಅಕಾರಿ ಮತ್ತು ತಾ.ಪಂ. ಇಒ ಜಂಟಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದ್ದಾರೆ. ಆದರೆ ಯಾರ ವಿರುದ್ಧ ಕ್ರಮಕೈಗೊಳ್ಳದೆ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ.
ಕೂಡಲೇ ವರದಿಯನ್ನು ಮರು ಪರಿಶೀಲನೆ ಮಾಡಿ ತಪ್ಪಿತಸ್ಥರ ಅಕಾರಿಗಳನ್ನು ಸೇವೆಯಿಂದ ವಜಾಗೊಳಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಲಿಂಗಣ್ಣ ಮಾಡಗಿರಿ, ಪದಾಕಾರಿಗಳಾದ ಅಬ್ರಾಹಂ ಪನ್ನೂರು, ರಾಜೇಂದ್ರ ಕಲ್ಲೂರು, ನರಸಪ್ಪ ಉಪ್ರಾಳ, ಕೃಷ್ಣಾ ಶಾಸಿ ಕ್ಯಾಂಪ್, ವಿಲ್ಸನ್ ಗೋಡಿಹಾಳ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net