ಕಾಮಗಾರಿ ನಿರ್ವಹಣೆಗೆ ವಿರೋಧ

21gkn1-a-
Published on

ಗೋಕರ್ಣ: ಇಲ್ಲಿನ ಸಮುದ್ರ ತೀರ ಬಳಿಯ ಸಂಗಮ ನಾಲೆಯಿಂದ ರಥಬೀದಿಯವರೆಗಿನ ಹಳ್ಳದ ಹೂಳೆತ್ತುವ ಕಾಮಗಾರಿ ನಿರ್ವಹಣೆಗೆ ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ ) ವಿರೋಧಿಸಿದೆ.

ಈ ಕುರಿತು ಗ್ರಾಮ ಪಂಚಾಯಿತಿಗೆ ಮನವಿ ನೀಡಿದ ಸಂಘಟನೆಯವರು, ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ಉಪ ವಿಭಾಗದ ಮೂಲಕ 14 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ರಥಬೀದಿಯಿಂದ ಸಮುದ್ರ ತೀರದ ಬಳಿಯ ಸಂಗಮ ನಾಲೆ ವೆರೆಗಿನ 1.4 ಕಿಮೀ ಮುಖ್ಯ ಹಳ್ಳದ ಹೂಳೆತ್ತಲಾಗಿದೆ. ಇದರಿಂದ ಸಮುದ್ರದ ಉಪ್ಪು ನೀರು ಒಳ ನುಗ್ಗಿ ರಥಬೀದಿಯ ಅನೇಕ ಮನೆಗಳಲ್ಲಿನ ಬಾವಿ ನೀರು ಉಪ್ಪಾಗಿದೆ. ಸಂಗಮ ಪ್ರದೇಶ ಸಮುದ್ರ ಮಟ್ಟಕ್ಕಿಂತ ತಗ್ಗಿನಲ್ಲಿರುವುದರಿಂದ ಉಪ್ಪು ನೀರು ಸರಾಗವಾಗಿ ಒಳ ಸೇರಲು ಅನುಕೂಲವಾಗಿದೆ. ಇದರ ಜೊತೆಗೆ ಹಳ್ಳದ ಹೂಳೆತ್ತಿದ್ದರಿಂದ ಅನೇಕ ಕಡೆಗಳಲ್ಲಿ ಹಳ್ಳದ ಎರಡೂ ಕಡೆಗಳಲ್ಲಿನ ಹಳೆಯ ಪಿಚ್ಚಿಂಗ್ ಕುಸಿಯುವ ಸಾಧ್ಯತೆಯಿದೆ. ಕಾರಣ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಕುರಿತು ಮಾತನಾಡಿದ ಕರವೇ ಯುವ ವಿಭಾಗದ ಅಧ್ಯಕ್ಷ ಕುಮಾರ ದೀವಟಿಗೆ ಕಾಮಗಾರಿಯಿಂದ ಅನುಕೂಲವಾಗುವ ಬದಲು ಹಳ್ಳಕ್ಕೆ ಹೊಂದಿಕೊಂಡಿರುವ ಜನರು ಹೊಸ ಸಮಸ್ಯೆ ಎದುರಿಸುವಂತಾಗಿದೆ. ಅಧಿಕಾರಿಗಳು ಇದನ್ನು ಬಗೆಹರಿಸದೇ ಇದ್ದಲ್ಲಿ ಕರವೇ ಹೋರಾಟಕ್ಕೆ ಮುಂದಾಗಲಿದೆ ಎಂದು ತಿಳಿಸಿದ್ದಾರೆ.

ಮುಖ್ಯ ಹಳ್ಳದಲ್ಲಿನ ಕೆಲ ಭಾಗದ ಹೂಳೆತ್ತಲು ಮಾತ್ರ ಹಣ ಮಂಜೂರಾಗಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಪಿಚ್ಚಂಗ್ ಮತ್ತು ಇತರ ವ್ಯವಸ್ಥೆ ಬಗ್ಗೆ ಜನ ಆಗ್ರಹಿಸಿದಲ್ಲಿ ಹೊಸ ಮಂಜುರಾತಿ ಪಡೆದು ಕೆಲಸ ನಿರ್ವಹಿಸಲು ಪ್ರಯತ್ನಿಸಲಾಗುವುದು. | ಆರ್.ಜಿ. ಗುನಗಿ ಜಿಪಂ ಇಂಜಿನಿಯರಿಂಗ್ ಉಪ ವಿಭಾಗ ಕುಮಟಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net