ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

15gkl2
Published on

ಗುರುಮಠಕಲ್: ಪಟ್ಟಣಕ್ಕೆ ಮಂಜೂರಾದ ಅಮೃತ ೨.೦ ಯೋಜನೆಯಡಿ ೨೧ ಕೋಟಿ ರೂ. ವೆಚ್ಚದ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ಮಾಜಿ ಸಚಿವ ಹಾಗೂ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಕುರಿತು ಪಟ್ಟಣದ ಅತಿಥಿಗೃಹದಲ್ಲಿ ನೀಲನಕ್ಷೆ ವೀಕ್ಷಣೆ ಮಾಡಿ, ಕಾಮಗಾರಿ ನಿರ್ವಹಿಸುತ್ತಿರುವ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳಿಂದ ಯೋಜನೆಯ ಸಂಪೂರ್ಣ ನೀಲನಕ್ಷೆ ಮತ್ತು ಮಾಹಿತಿ ಪಡೆದು ಮಾತನಾಡಿದ ಅವರು, ಯೋಜನೆ ೨೪.೭೫ ಲಕ್ಷ ರೂ.ದಾಗಿದ್ದು, ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಅಳಿದ ಕ್ಷೇತ್ರದಲ್ಲಿ ಕಾಮಗಾರಿ ಗುಣಮಟ್ಟದಿಂದ ಆಗಬೇಕು. ಕಳಪೆಯಾದಲ್ಲಿ ಸಹಿಸುವುದಿಲ್ಲ. ಹಾಗೊಂದು ವೇಲೆ ಲೋಪ ಎಸಗುವ ಅಧಿಕಾರಿಗಳ ಅಮಾನತಿಗೆ ಶಿಫಾರಸು ಮಾಡುವುದಾಗಿ ಎಚ್ಚರಿಕೆ ನೀಡಿದರು.

ಮುಂಬರುವ ೧೫ ದಿನಗಳ ಒಳಗಾಗಿ ವೀಕ್ಷಣೆಗೆ ಆಗಮಿಸಲಿದ್ದು, ವ್ಯವಸ್ಥತವಾಗಿ ಯೋಜನೆಯಂತೆ ಯಾವುದೇ ಲೋಪವಿಲ್ಲದೆ ಕಾಮಗಾರಿ ಮಾಡಬೇಕು ಎಂದು ತಾಕೀತು ಮಾಡಿದರು.

ಈ ವೇಳೆ ಅಧಿಕಾರಿಗಳಾದ ಅಶೋಕ ರಾಠೋಡ, ರಾಜಕುಮಾರ ಈ ಯೋಜನೆ ಕುರಿತು ಸಂಪೂರ್ಣ ಮಾಹಿತಿ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಚಪೆಟ್ಲಾ, ಪುರಸಭೆ ಉಪಾಧ್ಯಕ್ಷೆ ರೇಣುಕಾ ಪಡಿಗೆ, ಮಾಜಿ ಪುರಸಭೆ ಅಧ್ಯಕ್ಷ ಬಾಲಪ್ಪ ನೇರಟಿ, ಭೀಮಶಪ್ಪ ರಾಂಪೂರ, ಬಸವರಾಜ ರಾಚೋಟಿ, ಭಗವಂತರೆಡ್ಡಿ ಕೊಂಕಲ್, ಪುರಸಭೆ ಸದಸ್ಯ ಖಾಜಾ ಮೈನೊದ್ದೀನ್, ಅನ್ವರ್ ಅಹ್ಮದ್, ಪಾಪರೆಡ್ಡಿ ಬುರ್ಜು, ಬಸವಂತರಾಜ ನೀರೆಟಿ, ಪಾಂದಬಾಷಾ, ಮಾಣಿಕ ಮುಕಡಿ, ಫಯಾಜ್ ಅಹ್ಮದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net