

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ವರ್ಗಾವಣೆ ಪರ್ವ ಆರಂಭಗೊAಡಿದೆ. ಜಿಲ್ಲಾ ಆಸ್ಪತ್ರೆ ಅಧಿಕಾರಿ, ವೈದ್ಯರು ಸೇರಿದಂತೆ, ವಿವಿಧ ಇಲಾಖೆಗಳ ಅಧಿಕಾರಿಗಳು ಬೇರೆ ಜಿಲ್ಲೆಗಳಿಗೆ ವರ್ಗಾವಣೆಯಾಗಿದ್ದಾರೆ. ಈ ಮೂಲಕ ಕಾಫಿನಾಡಿನ ವರ್ಗಾವಣೆ ಪರ್ವ ಮುಂದುವರೆದಿದೆ.
ಹೌದು. ಒಂದುವರೆ ವರ್ಷದ ಒಳಗಾಗಿ ಚಿಕ್ಕಮಗಳೂರು ಉಪ ವಿಭಾಗದ ನಾಲ್ವರು ಉಪ ವಿಭಾಗಾಧಿಕಾರಿಗಳು ವರ್ಗಾವಣೆಯಾಗಿದ್ದಾರೆ. ಇದರ ಬೆನ್ನಲ್ಲೇ ಡಿಡಿಪಿಯು, ನಗರಸಭೆ ಆರ್‌ಐ ಸೇರಿದಂತೆ ಜಿಲ್ಲಾಸ್ಪತ್ರೆಯ ಐವರು ವೈದ್ಯರು ಹಾಗೂ ಕಚೇರಿ ಅಧೀಕ್ಷಕರು ಇದೀಗ ವರ್ಗಾವಣೆಗೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಆಗಿ ಕಾರ್ಯನಿರ್ವಹಿಸಿ ಉತ್ತಮ ಹೆಸರು ಸಂಪಾದಿಸಿದ್ದ ಡಾ. ಮೋಹನ್ ಇದೀಗ ಚಿಕ್ಕಮಗಳೂರಿನಿಂದ ವರ್ಗಾವಣೆಯಾಗಿದ್ದು, ತುಮಕೂರು ಜಿಲ್ಲೆ ಮಧುಗಿರಿ ಆಸ್ಪತ್ರೆಯ ಇಎನ್‌ಟಿ ಸ್ಪೆಷಲಿಸ್ಟ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಡಾ.ಮೋಹನ್ ಮಾತ್ರವಲ್ಲದೆ ಜಿಲ್ಲಾಸ್ಪತ್ರೆಯ ಹಲವು ವೈದ್ಯರನ್ನು ವರ್ಗಾವಣೆ ಮಾಡಲಾಗಿದೆ. ಸರ್ಜನ್ ಆಗಿದ್ದ ಡಾ. ನಾಗೇಶ್ ಅವರನ್ನು ಭದ್ರಾವತಿ ಆಸ್ಪತ್ರೆಗೆ, ಪ್ರಸೂತಿ ಹಾಗೂ ಸ್ತಿç ರೋಗ ತಜ್ಞೆ ಡಾ. ಆರತಿ ನಾಗೇಶ್ ಅವರನ್ನು ಶಿವಮೊಗ್ಗಕ್ಕೆ, ಮಕ್ಕಳ ತಜ್ಞ ಶ್ರೀನಿವಾಸ್ ಅವರನ್ನು ಕಡೂರಿಗೆ, ಡಾ.ಲೋಹಿತ್ ಅವರನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದೆ. ಇದಲ್ಲದೆ ಜಿಲ್ಲಾಸ್ಪತ್ರೆಯ ಕಚೇರಿ ಅಧಿಕ್ಷಕರಾಗಿದ್ದ ನೂರ್ ಅಹಮದ್ ಅವರನ್ನು ಬೆಂಗಳೂರು ಆರೋಗ್ಯ ಇಲಾಖೆಯ ಕಚೇರಿಗೆ ವರ್ಗಾವಣೆಗೊಳಿಸಲಾಗಿದೆ.
ಚಿಕ್ಕಮಗಳೂರಿನಲ್ಲಿ ಮೆಡಿಕಲ್ ಕಾಲೇಜು ಕಾರ್ಯಾರಂಭ ಮಾಡಿದೆ. ಇದರ ಪಕ್ಕದಲ್ಲಿಯೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಗೊಳ್ಳುತ್ತಿದೆ. ಇನ್ನು ಎರಡು ವರ್ಷದ ಒಳಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ. ಇದಕ್ಕೂ ಮೊದಲೇ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಸೇರಿದಂತೆ ಹಲವು ವೈದ್ಯರು ವರ್ಗಾವಣೆಗೊಂಡಿದ್ದಾರೆ.
ವರ್ಗಾವಣೆಗೊAಡಿರುವ ವೈದ್ಯರ ಹುದ್ದೆಗಳಿಗೆ ಬೇರೆ ವೈದ್ಯರ ನಿಯೋಜನೆಯಾಗಿಲ್ಲ. ಹೀಗಾಗಿ ವರ್ಗಾವಣೆಯಾಗಿರುವ ವೈದ್ಯರ ಹುದ್ದೆಗಳಿಗೆ ಬೇರೆಯವರು ಬರುವವರೆಗೆ ಈಗಿರುವವರೇ ಮುಂದುವರಿಯುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ಡಿಡಿಪಿಯು ವರ್ಗಾವಣೆ
ಚಿಕ್ಕಮಗಳೂರಿನ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾಗಿದ್ದ ಪುಟ್ಟ ನಾಯ್ಕ ಅವರನ್ನು ವರ್ಗಾವಣೆಗೊಳಿಸಲಾಗಿದ್ದು, ಅವರ ಸ್ಥಾನಕ್ಕೆ ಕೆ.ಮಂಜುಳಾ ಅವರು ಬಂದಿದ್ದಾರೆ. ಜೂನ್ ೩೦ರಂದು ಪುಟ್ಟ ನಾಯ್ಕ ಅವರು ವರ್ಗಾವಣೆಯಾಗಿದ್ದು, ಜು. ೨ರಂದು ಕೆ.ಮಂಜುಳಾ ಅಧಿಕಾರ ವಹಿಸಿಕೊಂಡಿದ್ದಾರೆ.
ಇದಲ್ಲದೆ ನಗರಸಭೆಯ ಕಂದಾಯ ನಿರೀಕ್ಷಕ ಶಿವಾನಂದ ಸಹ ವರ್ಗಾವಣೆಯಾಗಿದ್ದಾರೆ. ಇದಲ್ಲದೆ ಇನ್ನೂ ಹಲವು ಮಂದಿ ವರ್ಗಾವಣೆಯಾಗಲಿದ್ದಾರೆ ಎನ್ನಲಾಗುತ್ತಿದೆ.
ಮ್ಯೂಸಿಕಲ್ ಚೇರ್
ಚಿಕ್ಕಮಗಳೂರು ಉಪ ವಿಭಾಗದ ಉಪ ವಿಭಾಗಾಧಿಕಾರಿ ಹುದ್ದೆ ಮ್ಯೂಸಿಕಲ್ ಚೇರ್‌ನಂತಾಗಿದೆ. ಒಂದೂವರೆ ವರ್ಷದ ಅವಧಿಯೊಳಗೆ ನಾಲ್ವರು ಉಪ ವಿಭಾಗಾಧಿಕಾರಿಗಳು ವರ್ಗಾವಣೆಯಾಗಿದ್ದಾರೆ.
ಹಿಂದೆ ಎಸಿ ಆಗಿದ್ದ ರಾಜೇಶ್ ಅವರನ್ನು ಅವಧಿ ಮುಗಿಯುವ ಮುನ್ನವೇ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಲಾಗಿತ್ತು. ಚಿಕ್ಕಮಗಳೂರು ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ರಾಜೇಶ್ ಅವರು ಚಿಕ್ಕಮಗಳೂರು ನಗರಕ್ಕೆ ಸೀಮಿತವಾಗಿದ್ದ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹೋಗಲು ಒಪ್ಪದೆ ಬೇರೆಡೆಗೆ ತೆರಳಿದ್ದರು. ಮೂಡಿಗೆರೆ ಹಾಗೂ ಕಡೂರು ತಾಲೂಕಿನಲ್ಲಿ ನಡೆದಿದ್ದ ಅಕ್ರಮ ಭೂ ಮಂಜೂರಾತಿ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ಆರಂಭಿಸಿದ್ದರಿAದಲೇ ರಾಜೇಶ್ ಅವರನ್ನು ವರ್ಗಾವಣೆ ಮಾಡಲಾಗಿದೆಯೇ ಎಂಬ ಚರ್ಚೆಗಳು ಅಂದು ಆರಂಭಗೊAಡಿದ್ದವು.
ಆದರೆ ರಾಜೇಶ್ ಅವರಿಂದ ತೆರವಾದ ಹುದ್ದೆ ಅಲಂಕರಿಸಿದ್ದು ಐಎಎಸ್ ಅಧಿಕಾರಿ ದಲ್ಜಿತ್ ಕುಮಾರ್. ದಲ್ಜಿತ್ ಕುಮಾರ್ ಅವರೂ ತಮ್ಮ ಅವಧಿಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿ ತರಬೇತಿ ಅವಧಿ ಮುಗಿದ ತಕ್ಷಣ ವರ್ಗಾವಣೆಗೊಂಡರು.
ದಲ್ಜಿತ್ ಕುಮಾರ್ ಅವರ ಬಳಿಕ ಚಿಕ್ಕಮಗಳೂರು ಎಸಿ ಆಗಿ ರಶ್ಮಿ ಅವರು ಅಧಿಕಾರ ವಹಿಸಿಕೊಂಡಿದ್ದರು. ಆದರೆ ಕೆಲವೇ ತಿಂಗಳುಗಳಲ್ಲಿ ಅವರನ್ನು ಉಡುಪಿ ಜಿಲ್ಲೆಗೆ ವರ್ಗಾವಣೆ ಮಾಡಲಾಯಿತು. ರಶ್ಮಿ ಅವರ ಬಳಿಕ ದೇವರಾಜ್ ಅವರು ಎಸಿ ಆಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಅವರೂ ವರ್ಗಾವಣೆಯಾದರೂ. ಇದೀಗ ಸುದರ್ಶನ್ ಅವರು ಚಿಕ್ಕಮಗಳೂರು ಎಸಿ ಆಗಿ ಅಧಿಕಾರ ವಹಿಸಿಕೊಂಡಿದ್ದು, ಎರಡು ವರ್ಷಗಳಾದರೂ ಇಲ್ಲಿಯೇ ಇರಲಿ ಎಂಬುದು ಕಾಫಿ ನಾಡಿನ ಜನರ ಒತ್ತಾಯವಾಗಿದೆ.
ಐಎಎಸ್ ಅಧಿಕಾರಿ ದಲ್ಜಿತ್ ಕುಮಾರ್ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ರಶ್ಮಿ ಅವರು ಎಸಿ ಆಗಿ ಬಂದಿದ್ದರು. ಆದರೆ ಉಡುಪಿ ಜಿಲ್ಲೆಗೆ ಅವರ ಅಗತ್ಯವಿದೆ ಎಂದು ವರ್ಗಾವಣೆ ಮಾಡಲಾಯಿತು. ದೇವರಾಜ್ ಅವರು ರಾಷ್ಟಿö್ರÃಯ ಹೆದ್ದಾರಿ ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸಿದ್ದರು. ಹೀಗಾಗಿ ಅಲ್ಲಿಗೆ ಅವರ ಸೇವೆ ಅಗತ್ಯವಾಗಿದೆ ಎಂಬ ಕಾರಣಕ್ಕೆ ಅವರನ್ನು ಪುನಃ ರಾಷ್ಟಿö್ರÃಯ ಹೆದ್ದಾರಿ ಪ್ರಾಧಿಕಾರಕ್ಕೆ ಕರೆಯಿಸಿಕೊಳ್ಳಲಾಯಿತು. ಇದೀಗ ಸುದರ್ಶನ್ ಅವರು ಎಸಿ ಆಗಿ ಬಂದಿದ್ದಾರೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದAತೆ ಇದುವರೆಗೆ ನಾವು ಕಾರ್ಯನಿರ್ವಹಣೆ ಮಾಡಿz್ದೆÃವೆ.
ಮೀನಾ ನಾಗರಾಜ್, ಡಿಸಿ ಚಿಕ್ಕಮಗಳೂರು
ನೂತನ ಉಪನಿರ್ದೇಶಕರಿಗೆ ಗ್ರಾಮಸ್ಥರಿಂದ ಸ್ವಾಗತ
ಪದವಿ ಪೂರ್ವ ಶಿಕ್ಷಣ ಇಲಾಖೆಗೆ ನೂತನ ಉಪನಿರ್ದೇಶಕರಾಗಿ ನೇಮಕಗೊಂಡ ಕೆ.ಮಂಜುಳಾ ಅವರನ್ನು ಹಿರೇಮಗಳೂರು ಹಾಗೂ ಬಸವನಹಳ್ಳಿ ಗ್ರಾಮಸ್ಥರು ಬುಧ ವಾರ ಕಚೇರಿಗೆ ಭೇಟಿ ನೀಡಿ ಗೌರವ ಸಮರ್ಪಿಸಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ, ಟೌನ್‌ಕೋ ಆಪ ರೇಟಿವ್ ಸೊಸೈಟಿ ಉಪಾಧ್ಯಕ್ಷೆ ಹಾಲಮ್ಮ, ಗ್ರಾಮಸ್ಥರಾದ ರಾಜಶೇಖರ್, ಗಂಗಾಧರ್, ಜಗದೀಶ್, ಚಂದ್ರಪ್ಪ, ವೇಣುಗೋಪಾಲ್, ಶಿವಾಜಿ, ಶಾಂತಕುಮಾರ್, ಸಂತೋಷ್, ಡೈರಿ ಶಿವಾಜಿ, ಚೇತನ್ ಮತ್ತಿತರರಿದ್ದರು.