

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು ಎಲ್ಲೆಡೆಯು ಪ್ರವಾಹದ ಸ್ಥಿತಿ ಮುಂದುವರಿದಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದ ಜಮೀನು ಹಾಗೂ ತೋಟಗಳಿಗೆ ನೀರು ನುಗ್ಗಲಾರಂಭಿಸಿದೆ.
ಜಿಲ್ಲೆಯ ಮಲೆನಾಡು ಸೇರಿದಂತೆ ಬಯಲುಸೀಮೆ ಭಾಗದಲ್ಲಿಯೂ ಭಾರಿ ಮಳೆ ಮುಂದುವರೆದಿದೆ. ಅದರಲ್ಲೂ ಮಲೆನಾಡು ಭಾಗದಲ್ಲಂತೂ ವಾಡಿಕೆಗಿಂತಲೂ ನಾಲ್ಕು ಪಟ್ಟು ಮಳೆ ಹೆಚ್ಚಾಗಿರುವುದರಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಶೃAಗೇರಿ ತಾಲೂಕಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದಾಗಿ ಶೃಂಗೇರಿ ಪಟ್ಟಣದ ರಸ್ತೆಗಳು ಜಲಾವೃತವಾಗಿದ್ದು, ಶೃಂಗೇರಿ ದೇಗುಲದ ಕಪ್ಪೆ ನಾರಾಯಣ ದೇಗುಲ, ಗುರುಗಳ ಸಂಧ್ಯಾವAದನೆ ಮಂಟಪವು ಮುಳುಗಡೆಯಾಗಿದೆ. ಶೃಂಗೇರಿಯ ಗಾಂಧಿ ಮೈದಾನ ಸೇರಿದಂತೆ ದೇವಸ್ಥಾನದ ಪಾರ್ಕಿಂಗ್ ಜಾಗದ ಪ್ಯಾರಲಲ್ ರಸ್ತೆಗಳು ಕೂಡ ಮುಳುಗಡೆಯಾಗಿವೆ.
ಇನ್ನು ಕೆಮ್ಮಣ್ಣುಗುಂಡಿ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೊಂಡೇಖಾನ್ ಹಳ್ಳದ ಮೇಲ್ಭಾಗದ ರಸ್ತೆಯಲ್ಲಿ ಗುಡ್ಡ ಕುಸಿತ ಆರಂಭಗೊAಡಿದೆ. ಇದರಿಂದಾಗಿ ಕೆಸರು ಮಣ್ಣು ರಸ್ತೆ ಮೇಲೆ ಬಂದು ನಿಂತಿದ್ದರಿAದಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಕೆಲ ವಾಹನಗಳು ರಸ್ತೆಯಲ್ಲೇ ಸಿಲುಕಿಕೊಂಡ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ನೆರವಿನಿಂದ ರಸ್ತೆ ಮೇಲೆ ಹರಿಯುತ್ತಿದ್ದ ಕೆಸರು ನೀರನ್ನು ಬೇರೆ ಕಡೆ ತಿರುಗಿಸುವ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು. ಇದೇ ರೀತಿ ಮಳೆ ಮುಂದುವರಿದಿz್ದೆÃ ಆದಲ್ಲಿ ದೊಡ್ಡಮಟ್ಟದಲ್ಲಿ ಭೂ ಕುಸಿತ ಸಂಭವಿಸುವ ಸಾಧ್ಯತೆಯಿದೆ.
ಇನ್ನು ಮಲೆನಾಡು ಭಾಗದ ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ, ಕಳಸ, ಚಿಕ್ಕಮಗಳೂರು ತಾಲೂಕುಗಳಲ್ಲಿಯೂ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದಾಗಿ ನದಿ, ಹಳ್ಳ ಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯಲಾರಂಭಿಸಿವೆ. ಹೀಗಾಗಿ ಜನರು ಹಾಗೂ ಪ್ರವಾಸಿಗರು ನದಿ ಪಾತ್ರ ಹಾಗೂ ತಗ್ಗು ಪ್ರದೇಶಗಳಿಗೆ ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಅಂಗನವಾಡಿ, ಶಾಲೆಗಳಿಗೆ ರಜೆ
ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದೂವರೆದಿದ್ದು, ಆ.೧೯ರಂದು ಜಿಲ್ಲೆಯಲ್ಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆ, ಅಂಗನವಾಡಿ ಕೇಂದ್ರ, ಶಿಶುಪಾಲನಾ ಕೇಂದ್ರಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಆವತಿ, ಜಾಗರ, ವಸ್ತಾರೆ, ಆಲ್ದೂರು, ಖಾಂಡ್ಯ ಹೋಬಳಿಗಳು, ತರೀಕೆರೆ ತಾಲೂಕಿನ ಲಕ್ಕವಳ್ಳಿ ಮತ್ತು ಲಿಂಗದಹಳ್ಳಿ ಹೋಬಳಿಗಳು ಸೇರಿದಂತೆ ಕೊಪ್ಪ, ಕಳಸ, ಮೂಡಿಗೆರೆ, ಶೃಂಗೇರಿ, ಎನ್.ಆರ್.ಪುರ ತಾಲೂಕು ವ್ಯಾಪ್ತಿಯಲ್ಲಿ ರಜೆ ಘೋಷಣೆ ಮಾಡಲಾಗಿದೆ.
ಆ.೧೮ರ ಮಳೆ ವಿವರ
ತಾಲೂಕು ವಾಡಿಕೆಮಳೆ ಸುರಿದ ಮಳೆ
ಚಿಕ್ಕಮಗಳೂರು ೩.೯ಮಿ.ಮೀ ೩೨.೯ಮಿ.ಮೀ
ಕಡೂರು ೧.೫ಮಿ.ಮೀ ೭.೫ಮಿ.ಮೀ
ಕೊಪ್ಪ ೨೮.೯ಮಿ.ಮೀ ೧೨೧.೭ಮಿ.ಮೀ
ಮೂಡಿಗೆರೆ ೧೬.೬ಮಿ.ಮೀ ೫೯.೪ಮಿ.ಮೀ
ಎನ್.ಆರ್.ಪುರ ೧೩.೦ಮಿ.ಮೀ ೬೯.೨ಮಿ.ಮೀ
ಶೃಂಗೇರಿ ೩೫.೫ಮಿ.ಮೀ ೧೨೪.೫ಮಿ.ಮೀ
ತರೀಕೆರೆ ೪.೮ಮಿ.ಮೀ ೧೭.೮ಮಿ.ಮೀ
ಅಜ್ಜಂಪುರ ೨.೬ಮಿ.ಮೀ ೪.೬ಮಿ.ಮೀ
ಕಳಸ ೨೫.೬ ಮಿ.ಮೀ ೬೦.೬ಮಿ.ಮೀ
ಒಟ್ಟು ೧೪.೦ಮಿ.ಮೀ ೪೫ಮಿ.ಮೀ