ಕಾಫಿತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದ ಪತ್ನಿಯನ್ನು ಕೊಂದ ಪತಿ

ಕಾಫಿತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದ ಪತ್ನಿಯನ್ನು ಕೊಂದ ಪತಿ
Published on

ಹಾಸನ : ಕಾಫಿತೋಟಕ್ಕೆ ಕೆಲಸಕ್ಕೆಂದು ಹೋಗುತ್ತಿದ್ದ ಮಹಿಳೆಯ ಮೇಲೆ ಆಕೆಯ ಪತಿಯೇ ಏಕಾಏಕಿ ದಾಳಿ ನಡೆಸಿ ಕೊಚ್ಚಿ ಕೊಂದು ಹಾಕಿದ ಭೀಕರ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ಇಂದು ನಡೆದಿದೆ .ಇಂದ್ರಮ್ಮ(48)ಎಂಬಾಕೆ ಕೊಲೆಯಾದ ಮಹಿಳೆ. ಆಕೆಯ ಗಂಡ ಚಂದ್ರಯ್ಯ ಬೆಳ್ಳಿಗ್ಗೆಯೇ ಈ ಕೃತ್ಯ ನಡೆಸಿ ಪರಾರಿಯಾಗಿದ್ದಾನೆ.

ಇಂದ್ರಮ್ಮ ಅವರು ಬೆಳ್ಳಿಗೆ ನಾಲ್ಕು ಮಂದಿ ಇತರರ ಜೊತೆ ಸೇರಿಕೊಂಡು ಕೇಶವ ಮೂರ್ತಿ ಎಂಬುವರ ಕಾಫಿ ತೋಟಕ್ಕೆ ಕೆಲಸಕ್ಕೆಂದು ಹೋಗುತ್ತಿದ್ದರು ಈ ವೇಳೆ ಚಂದ್ರಯ್ಯ ಏಕಾಏಕಿಯಗಿ ಹಿಂದಿನಿಂದ ಬಂದು ದಾಳಿ ಮಾಡಿದ್ದಾನೆ .ಮಚ್ಚಿನಿಂದ ಕೊಚ್ಚಿದ್ದಾನೆ, ಮನಸೋ ಇಚ್ಚೆ ಹೆಂಡತಿಯ ಮೇಲೆ ದಾಳಿ ಮಾಡಿದ ದುಷ್ಕರ್ಮಿ ಇಂದ್ರಮ್ಮನ್ನು ಕಾಪಾಡಲು ಬಂದ ಮಹಿಳೆಯರ ಮೇಲೂ ಹಲ್ಲೆ ಮಾಡಿದ್ದಾನೆ ಅಷ್ಟು ಹೊತ್ತಿಗೆ ಅಲ್ಲಿದ್ದವರ ಬೊಬ್ಬೆ ಕೇಳಿ ಸಾಕಷ್ಟು ಜನರು ಸ್ಥಳಕ್ಕೆ ಧಾವಿಸುತ್ತಿದ್ದಂತೆ ಮಚ್ಚಿನೊಂದಿಗೆ ಪರಾರಿಯಾಗಿದ್ದಾನೆ.

ಹಿಂದೆಯೆ ಕೊಲೆಗೆ ಪ್ರಯತ್ನ

ಚಂದ್ರೇಗೌಡ ಇಂದ್ರಮ್ಮನ ಕೊಲೆಗೆ ಪ್ರಯತ್ನ ನಡೆಸುತ್ತಿರುವುದು ಇದೇ ಮೊದಲ ಸಲವೇನೂ ಅಲ್ಲ. ಆರು ತಿಂಗಳ ಹಿಂದೆ ನೇಣು ಹಾಕಿ ಕೊಲ್ಲಲು ಕೂಡಾ ಯತ್ನಿಸಿದ್ದ. ಕುಡಿತದ ಚಟ ಹೊಂದಿರುವ ಚಂದ್ರೇಗೌಡ ಮತ್ತು ಇಂದ್ರಮ್ಮ ದಂಪತಿಯ ಪುತ್ರ ಪ್ರದೀಪ್ ಚೀಕನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದಾನೆ.ಅವರು ಕೂಡ ಸಾಕಷ್ಟು ಬಾರಿ ತಂದೆಯ ಈ ಕೃತ್ಯಗಳನ್ನು ತಡೆಯಲು ಪ್ರಯತ್ನಿಸಿದ್ದರು.ಆದರೆ ಈ ಬಾರಿ ಸಾಧ್ಯವಾಗಿಲ್ಲ.

ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net