ಕಾಫಿ ಹೂ ಅರಳಿಸಿದ ಸಕಾಲಿಕ ಮಳೆ

21.npk-4
Published on

ನಾಪೋಕ್ಲು: ನಾಪೋಕ್ಲು ಭಾಗದಲ್ಲಿ ಸಕಾಲಕ್ಕೆ ಮಳೆಯಾಗಿರುವುದರಿಂದ ಕಾಫಿ ತೋಟಗಳಲ್ಲಿ ಕಾಫಿ ಹೂಗಳು ಅರಳಿ ಪರಿಮಳ ಬೀರುತ್ತಿವೆ.

ಸಾಧಾರಣವಾಗಿ ಫೆಬ್ರವರಿಯಲ್ಲಿ ಮಳೆಯಾದರೆ ಕಾಫಿ ಬೆಳೆಗೆ ಉತ್ತಮವಾಗಿದ್ದು, ಮಾರ್ಚ್ ತಿಂಗಳ ಮಳೆಯು ರೈತನ ಮೊಗದಲ್ಲಿ ಮಂದಹಾಸ ಬೀರುವಂತೆ ಮಾಡಿದೆ. ಈ ಸಮಯದಲ್ಲಿ ಮಳೆ ಸುರಿಯದಿದ್ದರೆ ರೈತರು ಕೃತಕ ನೀರಿನ ಸ್ಪ್ರಿಂಕ್ಲರ್ ಮೊರೆ ಹೋಗಬೇಕಾಗುತ್ತದೆ. ಕೆರೆ-ಕಟ್ಟೆಗಳು ಇರುವವರು ನೀರು ಹಾಯಿಸಬಹುದು. ಇದಕ್ಕೆ ಸಾವಿರಾರು ರೂ. ವೆಚ್ಚ ತಗುಲಲಿದ್ದು ಹಣವಂತರಿಗೆ ಮಾತ್ರ ಇದು ಸಾಧ್ಯವಾಗುತ್ತದೆ. ಆದರೆ ಶೇ.50 ಜನರು ಮಳೆಯ ನೀರನ್ನೇ ನಂಬಿಕೊಂಡಿದ್ದು ಈ ಬಾರಿಯ ಮಳೆಯಿಂದ ರೈತರು ಸಾವಿರಾರು ರೂ. ಉಳಿಕೆ ಮಾಡಿದಂತಾಗಿದೆ. ಮಳೆ ಬಾರದಿದ್ದರೆ ರೈತರು ಕೃತಕ ನೀರಿಗೆ ಮೊರೆ ಹೋಗಬೇಕಿದ್ದು, ಇದರಿಂದ ಹೊಳೆ ಮತ್ತು ಕೆರೆಯ ನೀರು ಬತ್ತಿ ಕುಡಿಯುವ ನೀರಿಗೂ ತೊಂದರೆಯಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಮಳೆಯಿಂದಾಗಿ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ. ಅದರಂತೆ ತೋಟಗಳಲ್ಲಿ ಹೂ ಅರಳಿ ನಿಂತಿದ್ದು ಇನ್ನು 15 ದಿನದಲ್ಲಿ ಬ್ಯಾಕಿಂಗ್ ಮಳೆ ಬಂದರೆ ಕಾಫಿ ಬೆಳೆಗಾರರು ಚೇತರಿಸಿಕೊಂಡು ಒಳ್ಳೆಯ ಫಸಲು ಬಂದು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ. ಇತ್ತೀಚಿನ ಕೆಲವು ವರ್ಷಗಳಿಂದ ಕಾಫಿ ತೋಟಗಳಿಗೆ ಸರಿಯಾದ ಮಳೆ ದೊರಕದೆ ಸಮಸ್ಯೆಯಾಗುತ್ತಿತ್ತು. ಈ ವರ್ಷದ ಹೂ ಮಳೆ ಕಾಫಿ ಬೆಳೆಗಾರರಿಗೆ ಆಶಾದಾಯಕವಾಗಿದೆ. ನಾಲ್ಕುನಾಡು ವ್ಯಾಪ್ತಿಯಲ್ಲಿ ಈಗಾಗಲೇ ಒಂದರಿಂದ ಎರಡು ಇಂಚಿನಷ್ಟು ಮಳೆ ಬಿದ್ದಿದೆ. ಮುಂದೆ ಬ್ಯಾಕಿಂಗ್ ಸಿಕ್ಕಿದರೆ ಬರುವ ವರ್ಷ ಉತ್ತಮ ಫಸಲು ದೊರಕುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಬೆಳೆಗಾರರು ತಮ್ಮ ತೋಟಗಳಲ್ಲಿ ಕೂಡಲೇ ಕಪಾತು ಕೆಲಸವನ್ನು ಮಾಡಬೇಕಾಗಿದೆ ಎಂದರು. ಕಾವೇರಪ್ಪ ಡಾ.ಸಣ್ಣುವಂಡ ಕಾವೇರಪ್ಪ, ಕೊಡಗು ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ, ನಾಪೋಕ್ಲು ಸುಮಾರು ಹತ್ತು ವರ್ಷಗಳಿಂದ ಕಾಫಿ ಫಸಲಿಗೆ ನಿರೀಕ್ಷಿತ ಮಳೆಯಾಗಿರಲಿಲ್ಲ. ಈ ವರ್ಷ ಉತ್ತಮ ಮಳೆಯಾಗಿದೆ. ನಮ್ಮಲ್ಲಿ ಎರಡು ಇಂಚಿಗೂ ಅಧಿಕ ಮಳೆಯಾಗಿದ್ದು, ಇದೇ ತರಹ ಮುಂದೆ ಮಳೆಯಾದರೆ ಮುಂದಿನ ವರ್ಷ ಬಂಪರ್ ಕಾಫಿ ಫಸಲು ದೊರಕಬಹುದು. ಅರೆಯಡ ಕರಂಬಯ್ಯ, ನಿವೃತ್ತ ಪಿಡಿಒ, ಕಾಫಿ ಬೆಳೆಗಾರ ನಾಪೋಕ್ಲು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net