ಕಾಫಿ ಬೆಳೆಯಲ್ಲಿ ಪುನಶ್ಚೇತನಾ ಕೃಷಿಯ ಅಗತ್ಯತೆ

17 ckm 5
ಚಿಕ್ಕಮಗಳೂರು ತಾಲೂಕಿನ ಹುಕ್ಕುಂದ ಗ್ರಾಮದಲ್ಲಿ ಮಹಿಳಾ ಸಣ್ಣ ಕಾಫಿ ಬೆಳೆಗಾರರಿಗೆ ಎಸ್.ಎಂ.ಸೇಹಗಲ್ ಫೌಂಡೇಷನ್‌ನಿAದ ಪುನಶ್ಚೇತನಾ ಕೃಷಿ ಅಳವಡಿಕೆ ಮತ್ತು ಅದರ ಪ್ರಾಮುಖ್ಯತೆ ತಿಳಿಸುವ ಕಾರ್ಯಾಗಾರ ಆಯೋಜಿಸಲಾಗಿತ್ತು.
Published on

ಚಿಕ್ಕಮಗಳೂರು: ಪುನಃರುತ್ಪಾದಕ ಕಾಫಿ ಕೃಷಿ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳಬೇಕು. ಇದು ರೈತರಿಗೆ ರಾಸಾಯನಿಕಗಳ ಬಳಕೆ ಕಡಿಮೆ ಮಾಡಿ ತಮ್ಮ ತೋಟದಲ್ಲೇ ಸಿಗುವ ತ್ಯಾಜ್ಯ, ಎಲೆ ಇತ್ಯಾದಿಗಳನ್ನು ಬಳಸಿಕೊಂಡು ಬೆಳೆಗೆ ಬೇಕಾಗುವ ಲಘು ಪೋಷಕಾಂಶಗಳನ್ನು ಉತ್ಪಾದಿಸಲು ಸಹಾಯಕವಾಗಿದೆ ಎಂದು ಎಸ್.ಎಂ.ಸೇಹಗಲ್ ಫೌಂಡೇಷನ್‌ನ ಸುಮಂತ್ ತಿಳಿಸಿದರು.

ತಾಲೂಕಿನ ಹುಕ್ಕುಂದ ಗ್ರಾಮದಲ್ಲಿ ಮಹಿಳಾ ಸಣ್ಣ ಕಾಫಿ ಬೆಳೆಗಾರರಿಗೆ ಎಸ್.ಎಂ.ಸೇಹಗಲ್ ಫೌಂಡೇಷನ್‌ನಿAದ ಆಯೋಜಿಸಲಾಗಿದ್ದ ಪುನಶ್ಚೇತನಾ ಕೃಷಿ ಅಳವಡಿಕೆ ಮತ್ತು ಅದರ ಪ್ರಾಮುಖ್ಯತೆ ತಿಳಿಸುವ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪುನಃರುತ್ಪಾದಕ ಅಥವಾ ಪುನಶ್ಚೇತನಾ ಕೃಷಿ ಎಂದರೆ ನೈಸರ್ಗಿಕ ಸಂಪತ್ತುಗಳನ್ನು (ಮಣ್ಣು, ನೀರು, ಜೈವಿಕ ಜೀವಿಗಳು) ಪುನಃ ಹಿಂಪಡೆಯುವ ಹಾಗೆ ಹಾಗೂ ಪರಿಸರದ ಸಮತೋಲನವನ್ನು ಕಾಪಾಡುವಂತೆ ನಡೆಸುವ ಕೃಷಿಯ ವಿಧಾನ. ಇದರಲ್ಲಿ ಮಣ್ಣಿನ ಆರೋಗ್ಯ, ಜೀವವೈವಿಧ್ಯತೆ, ಜೈವಿಕ ಎಣ್ಣೆ ಬಳಕೆ ಹಾಗೂ ಮಳೆನೀರು ಸಂರಕ್ಷಣೆ ಮೊದಲಾದವುಗಳ ಬಗ್ಗೆ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದರು.

ಕೃಷಿಯಲ್ಲಿ ಮಣ್ಣಿನ ಆರೋಗ್ಯ ಮುಖ್ಯವಾಗಿದ್ದು, ಮಣ್ಣನ್ನು ಕಾಪಾಡುವ ಜವಾಬ್ದಾರಿ ರೈತರದ್ದಾಗಿರುತ್ತದೆ. ಕೃಷಿ ರಾಸಾಯನಿಕ ಕಂಪನಿಗಳು ತಮ್ಮ ಲಾಭಕ್ಕಾಗಿ ಮಣ್ಣು ಹಾಗೂ ಮನುಷ್ಯರ ಅರೋಗ್ಯಕ್ಕೂ ಧಕ್ಕೆ ತರುವ ಔಷಧಗಳ ಬಳಕೆಗೆ ಉತ್ತೇಜನ ನೀಡುತ್ತವೆ. ಇದು ರೈತರಿಗೆ ತಿಳಿದಿರಬೇಕು ಹಾಗೂ ರಾಸಾಯನಿಕಗಳ ಬಳಕೆ ಕಡಿಮೆ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರೈತರಿಗೆ ಮಣ್ಣ ಪರೀಕ್ಷೆಯ ಬಗ್ಗೆ ಮಾಹಿತಿ ನೀಡಲಾಯಿತು ಮತ್ತು ಮಣ್ಣನ್ನು ತೆಗೆಯುವ ವಿಧಾನವನ್ನು ವಿವರಿಸಲಾಯಿತು. ಇದೇ ವೇಳೆ ಇಶಾ ಫೌಂಡೇಶನ್‌ನ ಮಾರುತಿ ಮಾತನಾಡಿ, ಕಾಫಿ ಬೆಳೆಯಲ್ಲಿ ಕಾಡು ಜಾತಿ ಮರಗಳ ಅಗತ್ಯತೆಯ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯರಾದ ನೇತ್ರಾವತಿ, ಜಯಲಕ್ಷಿö್ಮÃ, ಪೂಜಾ, ರವಿ ಸೇರಿದಂತೆ ಸ್ಥಳೀಯ ರೈತ ಮಹಿಳೆಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net