ಕಾಫಿ ಬೆಳೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ

MDG coffe
ಮೂಡಿಗೆರೆ ಜೆಸಿಐನಿಂದ ಕುನ್ನಹಳ್ಳಿಯಲ್ಲಿ ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಕಾಫಿ ಬೆಳೆಗಾರರನ್ನು ಸನ್ಮಾನಿಸಲಾಯಿತು. ಶಿವಕುಮಾರ್, ಗೋಪಾಲ ಗೌಡ, ಪ್ರದೀಪ್ ಕುನ್ನಹಳ್ಳಿ, ಶಿವಾನಂದ, ಕೆ.ಎನ್.ರವಿ, ಚಂದ್ರಶೇಖರ್ ಇತರರಿದ್ದರು.
Published on

ಮೂಡಿಗೆರೆ: ಕಾಫಿ ಬೆಳೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದು ಮುಖ್ಯ. ಮಣ್ಣಿನ ಫಲವತ್ತತೆ ಕಾಯ್ದುಕೊಂಡರೆ ಇಳುವರಿ ಹೆಚ್ಚಾಗಿ ಬೆಳೆಗಾರರಿಗೆ ವರದಾನವಾಗಲಿದೆ ಎಂದು ನೆಸ್ಲೆ ಇಂಡಿಯಾ ಕಾರ್ಯನಿರ್ವಾಹಕ ಶಿವಕುಮಾರ್ ಹೇಳಿದರು.

ಕುನ್ನಹಳ್ಳಿಯಲ್ಲಿ ಮೂಡಿಗೆರೆ ಜೆಸಿಐನಿಂದ ಶುಕ್ರವಾರ ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನೀರು ಮತ್ತು ನೆರಳಿನ ನಿರ್ವಹಣೆ, ಪೋಷಕಾಂಶ ಹಾಗೂ ಕೀಟಭಾದೆಯಿಂದ ಕಾಫಿ ಗಿಡವನ್ನು ರಕ್ಷಿಸಿಕೊಳ್ಳುವುದು ಮುಖ್ಯ. ಅಗತ್ಯವಿರುವ ಎಲ್ಲ ಪೋಷಕಾಂಶ ಬಳಕೆ ಜತೆಗೆ ಸೂಕ್ಷ್ಮ ಪೋಷಕಾಂಶಗಳನ್ನು ನೀಡುವುದು ಬೆಳೆಯ ಸಮಗ್ರ ಬೆಳವಣಿಗೆಗೆ ಪ್ರಮುಖವಾಗಿದೆ. ಕಾಫಿ ಕೊಯ್ಲೋತ್ತರ ಸಂಸ್ಕರಣೆ ಕೂಡ ಅಗತ್ಯವಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಕಾಫಿ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಮತ್ತು ಬೆಲೆ ಸಿಗಬೇಕಾದರೆ ಕಾಫಿಯನ್ನು ಸಂಸ್ಕರಣೆ ಮಾಡುವ ಅಗತ್ಯವಿದೆ ಎಂದು ತಿಳಿಸಿದರು.

ಹಳೇಮೂಡಿಗೆರೆ ಗ್ರಾಪಂ ಮಾಜಿ ಉಪಾಧ್ಯಕ್ಷ ಗೋಪಾಲ ಗೌಡ ಮಾತನಾಡಿ, ಈ ಬಾರಿ ಕಾಫಿಗೆ ಉತ್ತಮ ಧಾರಣೆ ಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಕಾಫಿಗೆ ಹೆಚ್ಚಿನ ಬೇಡಿಕೆಯಿದೆ. ರೈತರು ತೋಟದ ಅಭಿವೃದ್ಧಿ ಮತ್ತು ನೀರಾವರಿಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು.

ಹಿರಿಯ ರೈತರಾದ ಕೆ.ಎಂ.ಮಂಜುನಾಥ ಗೌಡ, ಪಾರ್ವತಮ್ಮ, ಗೋಪಾಲ ಗೌಡ, ವರಮಹಾಲಕ್ಷ್ಮೀ, ಕೃಷ್ಣೇಗೌಡ, ಚಂದ್ರೇಗೌಡ, ಸರೋಜಾ, ಲೀಲಾವತಿ, ಶೇಷೇಗೌಡ ಅವರನ್ನು ಸನ್ಮಾನಿಸಲಾಯಿತು.

ಮೂಡಿಗೆರೆ ಜೆಸಿಐ ಅಧ್ಯಕ್ಷ ಪ್ರದೀಪ್ ಕುನ್ನಹಳ್ಳಿ, ಗ್ರಾಪಂ ಸದಸ್ಯ ಶಿವಾನಂದ, ಮಾಜಿ ಅಧ್ಯಕ್ಷ ಕೆ.ಎನ್.ರವಿ, ಚಂದ್ರಶೇಖರ್, ಕೃತಿ ಪ್ರದೀಪ್, ಸುಧಾ, ರೇಖಾ ನಾಗರಾಜ್, ಮೇಘಾ ವಿಕಾಸ್, ಸುದೀಪ್, ಪ್ರೇಮಾ ಪುಣ್ಯಮೂರ್ತಿ, ಸಂಧ್ಯಾ ಸುದೀಪ್, ವಿಶ್ವ, ಆಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net