ಕಾಫಿ ಬೆಳೆಗಾರರಿಗೆ ಮಾಹಿತಿ ಕಾರ್ಯಾಗಾರ

26SPT4
Published on

ಕೊಡಗು : ಭಾರತ ಕಾಫಿ ಮಂಡಳಿ ಹಾಗು ಇಲ್ಲಿನ ಪುಷ್ಪಗಿರಿ ತೋಟಗಾರಿಕಾ ರೈತ ಉತ್ಪಾದಕರ ಸಂಘದ ವತಿಯಿಂದ ಸೋಮವಾರಪೇಟೆ ತಾಲೂಕಿನ ಕೂತಿ ಗ್ರಾಮದ ಒಕ್ಕಲಿಗರ ಸಮುದಾಯಭವನದಲ್ಲಿ ಇತ್ತೀಚೆಗೆ ಕಾಫಿ ಬೆಳೆಗಾರರಿಗೆ ಮಾಹಿತಿ ಕಾರ್ಯಾಗಾರ ನಡೆಯಿತು.


ಕಾಫಿ ಮಂಡಳಿಯ ಉಪನಿರ್ದೆಶಕರಾದ ಡಾ.ಚಂದ್ರಶೇಖರ್, ಕಾಫಿ ಗಿಡಗಳಿಗೆ ತಗಲುವ ಬೆರ‌್ರಿಬೋರರ್ ಕೀಟಭಾದೆ ಹಾಗು ಬೆಳೆಗಾರರು ಈ ಸಂದರ್ಭ ತೆಗೆದುಕೊಳ್ಳಬೇಕಾದ ಮುನ್ನೆಚ್ಚೆರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು.


ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ.ಪ್ರಭಾಕರ್ ಕಾಳು ಮೆಣಸು, ಅಡಿಕೆ ಮುಂತಾದ ತೋಟಗಾರಿಕಾ ಬೆಳೆಗಳ ಸಮಗ್ರ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಮತ್ತೋರ್ವ ವಿಜ್ಞಾನಿ ಡಾ.ವೀರೇಂದ್ರ ಕುಮಾರ್ ಭತ್ತದ ತಳಿಗಳ ಆಯ್ಕೆ, ಕೃಷಿಯ ನಿರ್ವಹಣೆ, ಔಷಧಿ ಸಿಂಪಡಿಕೆಯ ವಿಧಾನಗಳ ಕುರಿತು ಬೆಳೆಗಾರರಿಗೆ ಮಾಹಿತಿ ನೀಡಿದರು.


ಕಾರ್ಯಕ್ರಮದಲ್ಲಿ ಕೂತಿ ಗ್ರಾಮದ ಅಧ್ಯಕ್ಷ ಎಚ್.ಡಿ.ಮೋಹನ್, ಕಾಫಿ ಮಂಡಳಿ ವಿಸ್ತರಣಾಧಿಕಾರಿ ಲಕ್ಷ್ಮೀಕಾಂತ್, ಪುಷ್ಪಗಿರಿ ತೋಟಗಾರಿಕಾ ರೈತ ಉತ್ಪಾದಕರ ಸಂಸ್ಥೆ ಅಧ್ಯಕ್ಷ ಬಿ.ಜಿ.ರಮೇಶ್, ವ್ಯವಸ್ಥಾಪಕ ನಿರ್ದೇಶಕ ಸಿ.ಪಿ.ಸತೀಶ್, ನಿರ್ದೇಶಕರುಗಳಾದ ನಾಗೇಶ್, ಮಚ್ಚಂಡ ಅಶೋಕ್, ರಾಜು ದಳವಾಯಿ, ದಯಾನಂದ ಮತ್ತು ಬೆಳೆಗಾರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net