

ಮಡಿಕೇರಿ:
ವರ್ಷಪೂರ್ತಿ ಮಾಸಿಕ ಆದಾಯ ಕೊಡುವ ಬೆಳೆ ಹೆಗ್ಗಳಿಕೆಯ ರೇಷ್ಮೆ ಕೃಷಿ ಕೊಡಗಿನಲ್ಲಿ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದೆ. ರೇಷ್ಮೆ ಉತ್ಪಾದಿಸುವ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ಸದ್ಯಕ್ಕೆ ತೀರಾ ಕಡಿಮೆ ಪ್ರಮಾಣದ ಉತ್ಪಾದನೆ ಇದ್ದರೂ ಇಲಾಖೆಯ ಯೋಜನೆಗಳ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ನೀಡುವುದರ ಜತೆಗೆ ಸಮರ್ಪಕವಾಗಿ ತಲುಪಿಸುವ ಕೆಲಸ ಆದರೆ ಇನ್ನೂ ಹೆಚ್ಚಿನ ಸಾಧನೆ ನಿರೀಕ್ಷಿಸಬಹುದಾಗಿದೆ. ಮುಖ್ಯವಾಗಿ ಕೊಡಗು ಕೇಂದ್ರೀಕೃತವಾಗಿ ರೇಷ್ಮೆ ಇಲಾಖೆ ಕ್ರಿಯಾಶೀಲವಾಗಿ ಕೆಲಸ ಮಾಡಬೇಕಿದೆ ಎನ್ನುತ್ತಾರೆ ಬೆಳೆಗಾರರು.
ಕೊಡಗಿನಲ್ಲಿ ಕೃಷಿ ಎಂದ ಕೂಡಲೇ ನೆನಪಾಗುವುದೇ ಭತ್ತ, ಕಾಫಿ, ಕರಿಮೆಣಸು, ಏಲಕ್ಕಿ, ಕಿತ್ತಳೆ ಹಾಗೂ ಜೇನು. ಈ ಸಾಂಪ್ರದಾಯಿಕ ಬೆಳೆಗಳ ಜತೆ ನಾಲ್ಕು ದಶಕಗಳ ಹಿಂದೆ ಇಲ್ಲಿ ರೇಷ್ಮೆಯೂ ಜನಪ್ರಿಯ ಬೆಳೆ ಆಗಿತ್ತು ಎನ್ನುವುದನ್ನು ಈಗ ಕಲ್ಪಿಸಿಕೊಳ್ಳಲು ಕೂಡ ಕಷ್ಟ. ಆದರೂ ಜಿಲ್ಲೆಯ ಮೂರು ತಾಲೂಕುಗಳಲ್ಲೂ ರೇಷ್ಮೆ ಕೃಷಿ ಸಾಕಷ್ಟು ವೈಭವ ಕಂಡಿತ್ತು. ಅದರಲ್ಲೂ ಮಡಿಕೇರಿ ಮತ್ತು ಅವಿಭಜಿತ ಸೋಮವಾರಪೇಟೆ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆ ಗೂಡು ಉತ್ಪಾದನೆ ಆಗುತ್ತಿತ್ತು. ಕುಶಾಲನಗರದ ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿ ಸುಸಜ್ಜಿತ ರೇಷ್ಮೆ ಮಾರುಕಟ್ಟೆಯೂ ಇತ್ತು.
ನಂತರದ ದಿನಗಳಲ್ಲಿ ರೇಷ್ಮೆ ಮಾರುಕಟ್ಟೆಯ ಏರು-ಪೇರು, ಅಂದಿನ ಕೆಲವು ಅಧಿಕಾರಿಗಳ ಬೇಜವಾಬ್ದಾರಿತ, ಶುಂಠಿ ರೀತಿಯ ಬೆಳೆಗಳ ಕಡೆಗೆ ರೈತರ ಆಕರ್ಷಣೆ, ಕಾಫಿಗೆ ಬೆಲೆ ಹೆಚ್ಚಳ, ಪ್ರವಾಸೋದ್ಯಮದಲ್ಲಿ ಉದ್ಯೋಗ ಸೃಷ್ಟಿ ಮತ್ತಿತರ ಕಾರಣಗಳಿಂದ ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಇಳಿಮುಖ ಆಗುತ್ತಾ ಬಂತು. 2 ದಶಕಗಳ ಹಿಂದೆ ರೇಷ್ಮೆ ಗೂಡು ಉತ್ಪಾದನೆ ಶೂನ್ಯ ಪ್ರಮಾಣಕ್ಕೆ ಇಳಿದುಬಿಟ್ಟಿತ್ತು. ಜಿಲ್ಲೆಯಲ್ಲಿ ರೇಷ್ಮೆ ಬೆಳೆಯುವ ಪ್ರದೇಶವೇ ಇಲ್ಲವಾಗುತ್ತಿದ್ದಂತೆ ಕುಶಾಲನಗರದಲ್ಲಿ ಇದ್ದ ರೇಷ್ಮೆ ಮಾರುಕಟ್ಟೆ ಬಂದ್ ಆಯಿತು. ಆ ಕಟ್ಟಡದಲ್ಲಿ ಈಗ ಕುಶಾಲನಗರ ಗ್ರಾಮಾಂತರ ಮತ್ತು ಟ್ರಾಫಿಕ್ ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ.
ಜಿಲ್ಲೆಗೆ ಇದ್ದ ರೇಷ್ಮೆ ಇಲಾಖೆ ಉಪ ನಿರ್ದೇಶಕರ ಹುದ್ದೆಯೂ ಕಾಲಕ್ರಮೇಣ ರದ್ದಾಯಿತು. ಇದೀಗ ಪಕ್ಕದ ಪಿರಿಯಾಪಟ್ಟಣ ತಾಲೂಕಿನ ಉಸ್ತುವಾರಿಯಲ್ಲಿ ಜಿಲ್ಲೆಯ ರೇಷ್ಮೆ ಇಲಾಖೆ ಕಾರ್ಯಾಚರಿಸುವ ಸ್ಥಿತಿ ತಲುಪಿದೆ. ಇದರ ಜತೆಗೆ ಇಲಾಖೆಯಿಂದ ವರ್ಗ ಆದ, ನಿವೃತ್ತರಾದ ಸಿಬ್ಬಂದಿ ಜಾಗಕ್ಕೆ ಬದಲಿ ನೇಮಕವೂ ಆಗಿಲ್ಲ. ಹಾಗಾಗಿ ಬೆರಳೆಣಿಕೆಯಷ್ಟೇ ಸಿಬ್ಬಂದಿ ಉಳಿದುಕೊಂಡಿದ್ದರು. ಈಗ ಕೇವಲ ಒಬ್ಬ ಚಾಲಕ ಮಾತ್ರ ಇದ್ದಾರೆ. ಸದ್ಯದಲ್ಲೇ ಇವರೂ ನಿವೃತ್ತರಾಗಲಿದ್ದು, ನಂತರ ಕೊಡಗಿನ ರೇಷ್ಮೆ ಇಲಾಖೆ ಅಕ್ಷರಶಃ ಅನಾಥ ಆಗಲಿದೆ. ಕೂಡಿಗೆ ಕೃಷಿ ಕ್ಷೇತ್ರದಲ್ಲಿ ರೇಷ್ಮೆ ಇಲಾಖೆಗೆ ಇದ್ದ ಜಾಗವೂ ಈಗ ಬೇರೆ ಬೇರೆ ಇಲಾಖೆಗೆ ಹಂಚಿಕೆ ಆಗಿದೆ.
ರೇಷ್ಮೆ ಕೃಷಿ ವೈಭವದ ದಿನಗಳನ್ನು ಕಳೆದುಕೊಂಡು ಕೊಡಗಿನಲ್ಲಿ ಇನ್ನು ಕೇವಲ ನೆನಪಾಗಿ ಉಳಿಯಲಿದೆ ಎಂದುಕೊAಡಿರುವಾಗ ಇತ್ತೀಚಿನ 6-7 ವರ್ಷಗಳಿಂದ ಕೆಲವು ಉತ್ಸಾಹಿ ಸಿಬ್ಬಂದಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ರೇಷ್ಮೆಗೆ ಮತ್ತೆ ಜೀವ ಕೊಡುವ ಕೆಲಸ ಶುರು ಮಾಡಿದ್ದಾರೆ. ಈ ಪ್ರಯತ್ನ ನಿಧಾನಕ್ಕೆ ಫಲ ಕೊಡಲಾರಂಭಿಸಿದ್ದು, ಒಂದೊಮ್ಮೆ ರೇಷ್ಮೆ ಕೃಷಿಯಲ್ಲಿ ಹೆಸರು ಮಾಡಿದ್ದ ಕೊಡಗು ಮತ್ತೊಮ್ಮೆ ಗತ ವೈಭವಕ್ಕೆ ಮರಳುವ ಲP್ಷÀಣಗಳು ಕಾಣಿಸುತ್ತಿದೆ.
ಇಲಾಖೆ ಮಾರ್ಗದರ್ಶನದಲ್ಲಿ ಯೋಜನಬದ್ಧವಾಗಿ ಮತ್ತು ವೈಜ್ಞಾನಿಕವಾಗಿ ರೇಷ್ಮೆ ಕೃಷಿ ಮಾಡಿದರೆ ಪ್ರತಿ ತಿಂಗಳು ನಿಯಮಿತ ಆದಾಯ ಗಳಿಸಬಹುದು ಎನ್ನುತ್ತಾರೆ ಅಧಿಕಾರಿಗಳು. ಈ ನಿಟ್ಟಿನಲ್ಲಿ ರೇಷ್ಮೆ ಕೃಷಿಗೆ ಉತ್ತೇಜನ ನೀಡಲು ಸರ್ಕಾರ ರೂಪಿಸಿರುವ ಯೋಜನೆಗಳ ಬಗ್ಗೆ ರೈತರಿಗೆ ಅರಿವು ಮೂಡಿಸಲಾಗುತ್ತಿದೆ. ಎಲ್ಲಾ ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸುತ್ತಾ ಪ್ರೋತ್ಸಾಹ ನೀಡಲಾಗುತ್ತಿದೆ. ಹಾಗಾಗಿ ಅವಿಭಜಿತ ಸೋಮವಾರಪೇಟೆ ತಾಲೂಕು ಕೇಂದ್ರೀಕೃತವಾಗಿ ಹಿಪ್ಪುನೇರಳೆ ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ವಿಸ್ತಾರ ಆಗುತ್ತಿದೆ. ರೇಷ್ಮೆ ಗೂಡು ಉತ್ಪಾದನೆ ಪ್ರಮಾಣದಲ್ಲೂ ಹೆಚ್ಚಳ ಕಂಡುಬರುತ್ತಿದೆ.
ಕೊಡಗಿನಲ್ಲಿ ರೇಷ್ಮೆ ಕÊಷಿ ಮತ್ತೆ ಪ್ರವರ್ಧಮಾನಕ್ಕೆ ಬರಬೇಕು. ಈ ಮೂಲಕ ರೈತರಿಗೆ ಬದಲಿ ಆದಾಯದ ಮೂಲ ಗಟ್ಟಿ ಮಾಡಿಕೊಡಬೇಕು ಎನ್ನುವ ರೇಷ್ಮೆ ಇಲಾಖೆ ಅಧಿಕಾರಿಗಳ ಸಂಕಲ್ಪ ಒಳ್ಳೆಯ ದಿಕ್ಕಿನಲ್ಲಿ ಸಾಗುವ ಸೂಚನೆ ಸಿಕ್ಕಿದೆ.
ಅವಿಭಜಿತ ಸೋಮವಾರಪೇಟೆ ತಾಲೂಕಿನಲ್ಲಿ ಕೆಲವು ರೈತರು ರೇಷ್ಮೆ ಕೃಷಿಯ ಪ್ರಯೋಗಕ್ಕೆ ತಮ್ಮನ್ನು ಒಡ್ಡಿಕೊಂಡು ಯಶಸ್ವಿಯಾಗಿದ್ದಾರೆ. ಈ ಭಾಗದ ರೇಷ್ಮೆ ಬೆಳೆಗಾರರು ಮಾದರಿ ಎನ್ನುವಂತೆ ಗೂಡು ಉತ್ಪಾದನೆಯಲ್ಲಿ ದಾಖಲೆ ಮಾಡುತ್ತಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಮತ್ತೆ ರೇಷ್ಮೆ ಕÊಷಿ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದೆ.
ಉತ್ಸಾಹಿ ಅಧಿಕಾರಿಗಳು ಮತ್ತು ಸಿಬ್ಬಂದಿ ಫೀಲ್ಡ್ಗೆ ಇಳಿದ ಪರಿಣಾಮ ಮತ್ತು ರೈತರ ಮನೆ ಮನೆಗೆ ತೆರಳಿ ಮಾಹಿತಿ ನೀಡಿ ಮನವೊಲಿಸಿದ್ದರ ಫಲವಾಗಿ ರೇಷ್ಮೆ ಗೂಡು ಉತ್ಪಾದನೆಯ ಪ್ರಮಾಣದಲ್ಲಿ ಚೇತರಿಕೆ ಕಂಡುಬರುತ್ತಿದೆ. ಇದರಿಂದಾಗಿ ಉಳಿದ ತಾಲೂಕುಗಳಿಗೂ ಬೆಳೆ ವಿಸ್ತರಿಸಲು ಅಧಿಕಾರಿಗಳಿಗೆ ಪ್ರೋತ್ಸಾಹ ಸಿಕ್ಕಂತಾಗಿದ್ದು, ರೈತರು ಆಸಕ್ತಿ ತೋರಿಸಿದರೆ ಎಲ್ಲಾ ರೀತಿಯ ಸಹಕಾರ ಕೊಡಲು ಸಿದ್ದರಿದ್ದಾರೆ.
ಜಿಲ್ಲೆಯಲ್ಲಿ ಶೂನ್ಯಕ್ಕೆ ಇಳಿದಿದ್ದ ಹಿಪ್ಪುನೇರಳೆ ಬೆಳೆ ಈಗ ಸುಮಾರು 15 ಹೆಕ್ಟೇರ್‌ಗೆ ತಲುಪಿದೆ. ಕೇವಲ ಇಬ್ಬರು ಬೆಳೆಗಾರರ ಆಸಕ್ತಿಯಿಂದ ಪುನಾರಂಭ ಆಗಿದ್ದು ಈಗ ಬೆಳೆಗಾರರ ಸಂಖ್ಯೆ 27ಕ್ಕೆ ತಲುಪಿದೆ. 60-70 ಕೆಜಿಯಷ್ಟಿದ್ದ ವಾರ್ಷಿಕ ರೇಷ್ಮೆ ಗೂಡು ಉತ್ಪಾದನೆ 8,500 ಕೆ.ಜಿ. ತಲುಪಿದೆ. ವರ್ಷದಿಂದ ವರ್ಷಕ್ಕೆ ರೇಷ್ಮೆ ಗೂಡಿನ ಉತ್ಪಾದನೆಯ ಪ್ರಮಾಣ ಹೆಚ್ಚುತ್ತಲೇ ಬರುತ್ತಿರುವುದನ್ನು 2017-18ರಿಂದಲೇ ಗಮನಿಸಬಹುದಾಗಿದೆ.
ಸದ್ಯಕ್ಕೆ ಅವಿಭಜಿತ ಸೋಮವಾರಪೇಟೆ ತಾಲೂಕಿನ ಮೇಲೆ ಇಲಾಖೆ ಗಮನ ಕೇಂದ್ರೀಕರಿಸಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಜಿಲ್ಲೆಯ ವಿವಿಧೆಡೆಗೂ ಚಟುವಟಿಕೆ ವಿಸ್ತರಿಸುವ ಗುರಿ ಹೊಂದಲಾಗಿದೆ. ಮಡಿಕೇರಿ ಮತ್ತು ವಿರಾಜಪೇಟೆ ತಾಲೂಕಿನಲ್ಲಿ ಈ ಹಿಂದೆ ರೇಷ್ಮೆ ಬೆಳೆಯುತ್ತಿದ್ದವರನ್ನು ಇಲಾಖೆ ವತಿಯಿಂದ ಸಂಪರ್ಕಿಸುವುದಲ್ಲದೆ ಮತ್ತೆ ಹೊಸದಾಗಿ ರೇಷ್ಮೆ ಬೆಳೆಯಲು ಪ್ರೇರೇಪಿಸಲಾಗುತ್ತಿದೆ. ಹಲವು ರೈತರು ಆಸಕ್ತಿ ತೋರಿಸುತ್ತಿದ್ದಾರೆ. ಭವಿಷ್ಯದಲ್ಲಿ ಜಿಲ್ಲೆಯ ಉಳಿದ ತಾಲೂಕುಗಳಲ್ಲೂ ರೇಷ್ಮೆ ಬೆಳೆಗಾರರನ್ನು ಕಾಣಬಹುದಾಗಿದೆ ಎನ್ನುವುದು ಅಧಿಕಾರಿಗಳ ವಿಶ್ವಾಸದ ನುಡಿ.
ಕೊಡಗಿನಲ್ಲಿ ರೇಷ್ಮೆ ಉತ್ಪಾದನೆ:
ವರ್ಷ ಉತ್ಪಾದನೆ
2017-18 5,390 ಕೆಜಿ
2018-19 5,570 ಕೆಜಿ
2019-20 6,470 ಕೆಜಿ
2020-21 6,480 ಕೆಜಿ
2021-22 6,260 ಕೆಜಿ
2022-23 6,540 ಕೆಜಿ
2023-25 (ಫೆಬ್ರವರಿ)8,500 ಕೆ.ಜಿ.
ಕೊಡಗಿನಲ್ಲಿ ರೇಷ್ಮೆ ಕೃಷಿ ವೈಭವದಲ್ಲಿ ಇದ್ದ ಸಮಯದಲ್ಲಿ ಕಾಫಿಗೆ ಹೆಚ್ಚಿನ ಬೆಲೆ ಬಂತು. ಇದರ ಜತೆಗೆ ಆಗಿನ ಅಧಿಕಾರಿಗಳ ನಿರ್ಲಕ್ಷö್ಯವೂ ರೈತರಲ್ಲಿ ಬೇಸರ ಮೂಡಿಸಿತ್ತು. ಶುಂಠಿ ಕÊಷಿಯ ಪ್ರಭಾವೂ ಜಿಲ್ಲೆಯ ರೇಷ್ಮೆ ಕೃಷಿಯ ಮೇಲೆ ವ್ಯತರ‍್ಯಿಕ್ತ ಪರಿಣಾಮ ಬೀರಿತು. ರೇಷ್ಮೆ ಗೂಡು ಉತ್ಪಾದನೆ 300 ಕೆಜಿಗಿಂತಲೂ ಕಡಿಮೆಗೆ ಇಳಿದಾಗ ಕುಶಾಲನಗರದಲ್ಲಿ ಇದ್ದ ಮಾರುಕಟ್ಟೆಯೂ ಮುಚ್ಚಿ ಹೋಯಿತು. ನಂತರದ ದಿನಗಳಲ್ಲಿ ರಾಮನಗರ, ಬೆಂಗಳೂರು ಅವಲಂಬನೆ ಅನಿವಾರ್ಯ ಆದ ಕಾರಣ ಉಳಿದ ರೈತರೂ ರೇಷ್ಮೆ ಕÊಷಿ ಕೈಬಿಟ್ಟರು. ಈಗ ಜಿಲ್ಲೆಯಲ್ಲಿ ಬಿತ್ತನೆ ತಳಿಯ ಗೂಡು ಉತ್ಪಾದನೆ ಮಾಡಲಾಗುತ್ತಿದೆ. ಉತ್ತಮ ಬೇಡಿಕೆಯೂ ಇದೆ. ಹಾಸನ ಮತ್ತು ಬೆಂಗಳೂರಿನಲ್ಲಿ ಮಾರಾಟ ಮಾಡಬಹುದು. ಅಗತ್ಯ ಸಿಬ್ಬಂದಿ ಜತೆ ಇಲಾಖೆ ಸದÊಢವಾದರೆ ರೇಷ್ಮೆ ಕÊಷಿಯಲ್ಲಿ ಮತ್ತಷ್ಟು ಸಾಧನೆ ಜಿಲ್ಲೆಯಲ್ಲಿ ನಿರೀಕ್ಷಿಸಬಹುದು. ಮೊದಲಿದ್ದ ರೇಷ್ಮೆ ಇಲಾಖೆ ಉಪನಿರ್ದೇಶಕರ ಹುದ್ದೆಯೂ ಕೊಡಗಿಗೆ ಮರಳಿ ಸಿಗಬೇಕಿದೆ ಎನ್ನುತ್ತಾರೆ ಬೆಳೆಗಾರರು. ಅಥವಾ ಕೊಡಗು ರೇಷ್ಮೆ ಇಲಾಖೆಯನ್ನು ಸಂಪೂರ್ಣವಾಗಿ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನಲ್ಲಿ ವಿಲೀನ ಮಾಡಲಿ ಎನ್ನುವ ಒತ್ತಾಯವೂ ಇದೆ.
ರೇಷ್ಮೆ ಕೃಷಿ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ರೇಷ್ಮೆ ಇಲಾಖೆ ಮೂಲಕ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಫಲಾನುಭವಿ ಆಧಾರಿತ ಪ್ರೋತ್ಸಾಹಧನ ಯೋಜನೆ ಜಾರಿಗೆ ತಂದಿದೆ. ರೇಷ್ಮೆ ಅಭಿವೃದ್ಧಿ ಯೋಜನೆ, ಪ್ರಧಾನಮಂತ್ರಿ ಕೃಷಿ ಸಂಚಾಯಿ ಯೋಜನೆ, ರಾಷ್ಟಿçÃಯ ಕೃಷಿ ವಿಕಾಸ ಯೋಜನೆ, ಕೇಂದ್ರ ವಲಯ ಸಿಲ್ಕ್ ಸಮಗ್ರ ಯೋಜನೆ ಅನುಷ್ಠಾನಗೊಳಿಸಲಾಗಿದೆ.
ಕೆ. ವೆಂಕಟೇಶ್, ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ
ಕೊಡಗಿನ ರೇಷ್ಮೆ ಇಲಾಖೆಯಲ್ಲಿ ಒಬ್ಬ ಚಾಲಕ ಹೊರತುಪಡಿಸಿದರೆ ಬೇರೆ ಸಿಬ್ಬಂದಿ ಇಲ್ಲ. ಪಿರಿಯಾಪಟ್ಟಣ ತಾಲೂಕು ರೇಷ್ಮೆ ಇಲಾಖೆ ಉಸ್ತುವಾರಿಯಲ್ಲಿ ನಮ್ಮಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದೆ. ಇಲಾಖೆಯ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲೇ ಸೂಕ್ತ ಸಿಬ್ಬಂದಿ ನೇಮಕ ಆಗಿ ಇಲಾಖೆ ಬಲಪಡಿಸಿದರೆ ರೈತರಿಗೆ ಅನುಕೂಲ. ಇದಾಗದಿದ್ದಲ್ಲಿ ಕೊಡಗು ರೇಷ್ಮೆ ಇಲಾಖೆಯನ್ನು ಸಂಪೂರ್ಣವಾಗಿ ಮೈಸೂರು ಜಿಲ್ಲೆಯ ರೇಷ್ಮೆ ಇಲಾಖೆ ಜತೆ ವಿಲೀನ ಮಾಡಲಿ. ಈ ಬಗ್ಗೆ ಸಂಬAಧಿಸಿದ ಇಲಾಖೆ ಸಚಿವರಿಗೂ ಮನವಿ ಸಲ್ಲಿಸಿದ್ದೇವೆ.
ಬಿ.ಬಿ. ಮಹೇಶ್, ರೇಷ್ಮೆ ಬೆಳೆಗಾರ, ಬಸವನಹಳ್ಳಿ, ಕುಶಾಲನಗರ ತಾಲೂಕು