ಕೊಡಗು : ಸೋಮವಾರಪೇಟೆಯ ಹಾನಗಲ್ ಬಾಣೆಯ ಭೀಮಯ್ಯ ಎಂಬುವರ ಕಾಫಿ ತೋಟದಲ್ಲಿ ಶುಕ್ರವಾರ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ತೋಟದ ಪಕ್ಕದ ಮನೆಯವರಾದ ನಾರಾಯಣ ಎಂಬುವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗುವಿನ ಜನನವನ್ನು ಮುಚ್ಚಿಡುವ ದೃಷ್ಟಿಯಿಂದ ಜನಿಸುವ ಮೊದಲೇ ಮೃತಪಟ್ಟ ಅಥವಾ ಜನಿಸಿದ ನಂತರ ಜೀವಂತ ಮಗುವನ್ನು ತೋಟದೊಳಗೆ ಮಲಗಿಸಿ ಹೋಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳ ಮಹಜರು ನಡೆಸಿದ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.