ಕಾಫಿ ತೋಟಗಳಿಗೆ ಒಂಟಿ ಸಲಗ ಲಗ್ಗೆ

2ald 2 web
Published on

ಆಲ್ದೂರು: ಮಾವಿನಗುಣಿ ಸುತ್ತಮುತ್ತ ಶುಕ್ರವಾರ ಒಂಟಿ ಸಲಗ ಕಾಫಿ ತೋಟಗಳಿಗೆ ಲಗ್ಗೆ ಇಟ್ಟು ಬಾಳೆ, ಅಡಕೆ, ಕಾಫಿ ಗಿಡಗಳನ್ನು ಮುರಿದು ಹಾಕಿದೆ. ಈ ಪ್ರದೇಶದ ತೋಟಗಳಲ್ಲಿ ಸಂಚರಿಸುತ್ತಿದ್ದು ಜನ ಭಯಭೀತರಾಗಿದ್ದಾರೆ. ಗುರುವಾರ ರಾತ್ರಿ ಮಾವಿನಗುಣಿ ಗ್ರಾಮದ ಈರಾಚಾರ್ ಅವರ ಕಾಫಿ ತೋಟದಲ್ಲಿ ಕಾಫಿ ಗಿಡಗಳನ್ನು ಮುರಿದುಹಾಕಿ ಬಾಳೆ ಗಿಡಗಳನ್ನು ತಿಂದು ತೋಟಕ್ಕೆ ಹಾನಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net