ಕಾಫಿ, ಅಡಕೆ, ಬಾಳೆ ಬೆಳೆ ನಾಶ

27blrp2
Published on

ಬೇಲೂರು: ತಾಲೂಕಿನ ಅರೇಹಳ್ಳಿ ಸಮೀಪದ ಮಾಲಹಳ್ಳಿ ಕೆರೆಯಲ್ಲಿ ಬುಧವಾರ ರಾತ್ರಿ ಈಜಾಡಿದ 15ಕ್ಕೂ ಹೆಚ್ಚು ಆನೆಗಳ ಹಿಂಡು ನಂತರ ಪಕ್ಕದ ತೋಟಕ್ಕೆ ದಾಳಿ ಮಾಡಿ ಬೆಳೆ ನಾಶಪಡಿಸಿವೆ.

ಅರೇಹಳ್ಳಿ ಸಮೀಪದ ಪ್ಲಾಂಟರ್ಸ್ ಕ್ಲಬ್ ಸಮೀಪ ಕಾಣಿಸಿಕೊಂಡಿದ್ದ ಕಾಡಾನೆಗಳು, ಅಕ್ಕಪಕ್ಕದ ತೋಟಗಳ ಮೂಲಕ ಅರೇಹಳ್ಳಿ ಸಮೀಪದ ಮಾಲಹಳ್ಳಿಯ ಎಚ್.ಎನ್.ಚಂದ್ರು ಅವರ ತೋಟದಲ್ಲಿರುವ ಕೆರೆಯ ನೀರಿನಲ್ಲಿ ಸಾಕಷ್ಟು ಸಮಯದವರೆಗೂ ಈಜಾಡಿವೆ. ನಂತರ ನೇರವಾಗಿ ಪಕ್ಕದಲ್ಲಿದ್ದ ಕಾಫಿ ತೋಟಕ್ಕೆ ನುಗ್ಗಿ ತೋಟದಲ್ಲಿ ಹುಲುಸಾಗಿ ಬೆಳೆದಿದ್ದ ಕಾಫಿ, ಅಡಕೆ, ಹಾಗೂ ಫಸಲಿಗೆ ಬಂದಿದ್ದ ಬಾಳೆ ಬೆಳೆಯನ್ನು ನಾಶಪಡಿಸಿವೆ. ಕಾಡಾನೆಗಳ ದಾಳಿಗೆ ಗಿಡಗಳೆಲ್ಲವನ್ನೂ ನೆಲಕ್ಕುರುಳಿಸಿವೆ. ಜತೆಗೆ ಪೈಪ್‌ಗಳನ್ನು ತುಳಿದು ಹಾಕಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net