ಕಾಪು ಕಾಡಿನಲ್ಲಿ ವನ ಮಹೋತ್ಸವ

17 gkp 01
Published on

ಗೋಣಿಕೊಪ್ಪ: ಕೊಡವ ರೈಡರ್ಸ್ ಕ್ಲಬ್, ಅರಣ್ಯ ಮಹಾವಿದ್ಯಾಲಯ ಪೊನ್ನಂಪೇಟೆ ಹಾಗೂ ಬೆಂಗಳೂರಿನ ಇಂಚರ ಇನ್ಫೋಟೆಕ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಹುದಿಕೇರಿ ಭದ್ರಕಾಳಿ ದೇವಸ್ಥಾನದ ಕಾಪುಕಾಡಿನಲ್ಲಿ ಭಾನುವಾರ ವನ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿವಿಧ ಬಗೆಯ ಕಾಡು ಹಣ್ಣುಗಳು ಸೇರಿದಂತೆ ಹತ್ತಾರು ಜಾತಿಯ ಗಿಡಗಳನ್ನು ನೆಡಲಾಯಿತು. ಕೊಡವ ರೈಡರ್ಸ್ ಕ್ಲಬ್ ಅಧ್ಯಕ್ಷ ಅಜ್ಜಿಕುಟ್ಟೀರ ಪೃಥ್ವಿ ಸುಬ್ಬಯ್ಯ ಹಾಗೂ ತಂಡ ನೇತೃತ್ವ ವಹಿಸಿತ್ತು. ಇಂಚರ ಇನ್ಫೋಟೆಕ್ ಸಂಸ್ಥೆಯ ಕೇಟೊಳೀರ ವಿನ್ಸಿ ದೇವಯ್ಯ ತಂಡ ಹಾಗೂ ಅರಣ್ಯ ಮಹಾವಿದ್ಯಾಲಯದ ಕೊಣೇರೀರ ನಾಣಯ್ಯ, ಪ್ರಮುಖರಾದ ಕೇಟೊಳೀರ ಶಮ್ಮಿ, ತೀತಿರ ಅಭಿಷೇಕ, ಮುತ್ತಣ್ಣ, ಚಕ್ಕೇರ ಅನುಪಮಾ ತಮ್ಮಯ್ಯ, ಕುಪ್ಪಣಮಾಡ ದಿಲೀಪ, ದೇವಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net