ಕಾನ್ಶಿರಾಂ ಅವರ ಹೋರಾಟದ ಪರವಾಗಿ ಅಧಿಕಾರ

FB_IMG_1742026471044
Published on

ಚಾಮರಾಜನಗರ: ದಾದಾಸಾಹೇಬ್ ಕಾನ್ಶಿರಾಂ ಅವರ ಹೋರಾಟದ ಫಲವಾಗಿ ಪ್ರಸ್ತುತ ದಲಿತರು, ಹಿಂದುಳಿದವರು ಅಧಿಕಾರ ಅನುಭವಿಸುತ್ತಿದ್ದಾರೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ಎನ್.ನಾಗಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಪರಿವರ್ತನಾ ಅಧ್ಯಯನ ಕೇಂದ್ರದಲ್ಲಿ ಬಹುಜನ ಸಮಾಜ ಪಕ್ಷದ ವತಿಯಿಂದ ಶನಿವಾರ ಆಯೋಜಿಸಿದ್ದ ದಾದಾಸಾಹೇಬ್ ಕಾನ್ಶಿರಾಂ 91 ನೇ ಜನ್ಮದಿನಾಚರಣೆಯನ್ನು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಆಚರಿಸಲಾಯಿತು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಾಮಾಜಿಕ ಚಳುವಳಿಯನ್ನು ಕಾನ್ಶಿರಾಂ ಅವರು ಮುನ್ನೆಡೆಸಿದರು. ಅವರ ಹೋರಾಟದ ಲವಾಗಿ ಪ್ರತಿಯೊಂದು ಪಕ್ಷಗಳಲ್ಲಿಯೂ ದಲಿತರು, ಹಿಂದುಳಿದವರಿಗೆ ಮಾನ್ಯತೆ ಸಿಗುವಂತಾಗಿದೆ. ಅವರ ಪರಿಶ್ರಮದ ಲವಾಗಿ ಪ್ರತಿಯೊಬ್ಬರು ಸಂವಿಧಾನವನ್ನು ಅರ್ಥಮಾಡಿಕೊಳ್ಳುವ ಸಂದರ್ಭ ಸೃಷ್ಟಿಯಾಗಿದೆ. ಅವರ ಆಲೋಚನೆಗಳನ್ನು ಇಂದಿನ ಸಮಾಜ ಅಳವಡಿಸಿಕೊಂಡು ಮುನ್ನಡೆಯಬೇಕಿದೆ. ಪ್ರಸ್ತುತ ಕಾನ್ಶಿರಾಂ ಅವರ ಸೈದ್ಧಾಂತಿಕ ಬದ್ಧತೆಯ ರಾಜಕಾರಣ ನಾಡಿನಲ್ಲಿ ಅಗತ್ಯವಾಗಿದೆ ಎಂದು ಹೇಳಿದರು.

ಈ ದೇಶದ ಮೂಲನಿವಾಸಿಗಳಾದ ಬಹುಜನರು ದೇಶವನ್ನಾಳುವ ರಾಜಕೀಯ ಶಕ್ತಿಗಳಾಗಿ ಬೆಳೆಯಬೇಕು, ಸಂವಿಧಾನ ಜಾರಿ ಮಾಡುವ ಸಂಸತ್ ಮತ್ತು ವಿಧಾನ ಸಭೆಗಳಲ್ಲಿ ನನ್ನಜನರಿರಬೇಕೆನ್ನುವ ಆಶಯಗಳಿಗೆ ವಿಜ್ಞಾನಿ ಮತ್ತು ರಾಜಕೀಯ ಸಂಶೋಧಕ ದಾದಾಸಾಹೇಬ್ ಕಾನ್ಶಿರಾಂ ಅವರು ಮನಸ್ಸು ಮಾಡಿದರು ಎಂದು ನುಡಿದರು.

ಅತಿಹೆಚ್ಚು ಬಡವರಿರುವ ಉತ್ತರಪ್ರದೇಶ ರಾಜ್ಯವನ್ನು ರಾಜಕೀಯ ಪ್ರಯೋಗಶಾಲೆಯನ್ನಾಗಿಸಿಕೊಂಡ ರಾಜಕೀಯ ತಜ್ಞ ದಾದಾಸಾಹೇಬ್ ಕಾನ್ಶಿರಾಂ ಅವರು ಬಹುಜನ ಚಳುವಳಿ ಆರಂಭಿಸಿ, ಬಿಎಸ್‌ಪಿ ಪಕ್ಷ ಸ್ಥಾಪಿಸಿ,ಕಾಂಗ್ರೆಸ್ ಬಿಜೆಪಿ ಪಕ್ಷಗಳಿಗೆ ಸೆಡ್ಡು ಹೊಡೆದು, ಹಂತ ಹಂತವಾಗಿ ಗೆಲುವು ಸಾಧಿಸಿ, ಮಾಯಾವತಿ ಅವರನ್ನು 3ಬಾರಿ ಮುಖ್ಯಮಂತ್ರಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಅಂಬೇಡ್ಕರ್ ಅವರ 'ಜಾತಿ ನಿರ್ಮೂಲನೆ' ಪುಸ್ತಕವನ್ನು ಓದಿದ ನಂತರ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದರು. ಅವರು ತಮ್ಮ ಹೆಸರಿನಲ್ಲಿ ಭೂಮಿ ಅಥವಾ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವುದಿಲ್ಲ ಮತ್ತು ಅವಿವಾಹಿತರಾಗಿಯೇ ಉಳಿಯುತ್ತಾರೆ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಬಿಎಸ್ಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಬ್ಯಾಡಮೂಡ್ಲು ಬಸವಣ್ಣ, ಜಿಲ್ಲಾ ಸಂಯೋಜಕ ವಕೀಲ ಪುಟ್ಟಸ್ವಾಮಿ ರಾಮಸಮುದ್ರ, ಜಿಲ್ಲಾ ಉಸ್ತುವಾರಿ ಅಮಚವಾಡಿ ಪ್ರಕಾಶ್, ಜಿಲ್ಲಾಧ್ಯಕ್ಷ ಬ.ಮ.ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ಚಂದ್ರಕಾಂತ್, ರಂಗಸ್ವಾಮಿ ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net