ಕಾನ್ ಬೈಲ್ ಶಾಲಾ ಆವರಣದಲ್ಲಿ ಶ್ರಮದಾನ

sept 25 sunti02
ನಾಕೂರುಶಿರಂಗಾಲ ಗ್ರಾಮದ ಕಾನ್ ಬೈಲ್ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಯೋತ್ಸವ-ನಿತ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಬಿ.ಜಿ.ರಮೇಶ್, ಸದಸ್ಯರಾದ ಎಂ.ಸಿ.ಜಗನಾಥ್, ಪಿಡಿಒ ಗೂಳಪ್ಪ ಕೂತಿನಾರ್ ಇತರರು ಇದ್ದರು.
Published on

ಸುಂಟಿಕೊಪ್ಪ: ನಾಕೂರುಶಿರಂಗಾಲ ಗ್ರಾಮದಲ್ಲಿ ಗ್ರಾಮೀಣಾಭಿವೃಧ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಕೊಡಗು ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ವತಿಯಿಂದ ಇತ್ತೀಚೆಗೆ ಕಾನ್ ಬೈಲ್ ಶಾಲಾ ಆವರಣದಲ್ಲಿ ಸ್ವಚ್ಯೋತ್ಸವ-ನಿತ್ಯೋತ್ಸವ ಹಾಗೂ ಶ್ರಮದಾನ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.

ಕಾನ್‌ಬೈಲ್ ಶಾಲಾ ಆವರಣದಲ್ಲಿ ಗಿಡಗಂಟಿ ಕಡಿಯುವ ಮೂಲಕ ಶ್ರಮದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಬಿ.ಜಿ.ರಮೇಶ್, ಸದಸ್ಯರಾದ ಎಂ.ಸಿ.ಜಗನಾಥ್, ಪಿಡಿಒ ಗೂಳಪ್ಪ ಕೂತಿನಾರ್, ಸಿಬ್ಬಂದಿ, ಗ್ರಾಮದ ಯುವಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net