ಕಾನೂನುಬಾಹಿರ ಕೃತ್ಯ ಎಸಗಿದರೆ ರೌಡಿಶೀಟ್ ಓಪನ್

9bgp3ph
Published on

ಬಾಗೇಪಲ್ಲಿ : ಮಟ್ಕಾ, ಅಕ್ರಮ ಮರಳು ಗಣಿಗಾರಿಕೆ, ಗಾಂಜಾ ಇತ್ಯಾದಿ ಮಾದಕವಸ್ತು ಮಾರಾಟ ಇತ್ಯಾದಿ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿಕೊಂಡರೆ ರೌಡಿಶೀಟ್ ತೆರೆದು ಕಠಿಣ ಕ್ರಮ ಕೈಗೊಳ್ಳುವುದಾಗಿ ಚಿಕ್ಕಬಳ್ಳಾಪುರ ಡಿವೈಎಸ್‌ಪಿ ರವಿಶಂಕರ್ ಎಚ್ಚರಿಕೆ ನೀಡಿದರು.

ಪಟ್ಟಣದ ಪೊಲೀಸ್ ಠಾಣೆಯ ಮುಂಭಾಗ ಏರ್ಪಡಿಸಿದ್ದ ರೌಡಿಗಳ ಪರೇಡ್‌ನಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಒಟ್ಟು 145 ರೌಡಿಶೀಟರ್‌ಗಳು ಇದ್ದಾರೆ. ಈ ಪೈಕಿ 120 ಜನ ಇಲ್ಲಿಗೆ ಬಂದಿದ್ದೀರಿ. ಅದು ಯಾರೇ ಆಗಿದ್ದರೂ, ಸಮಾಜಘಾತುಕ ಚಟುವಟಿಕೆಯಲ್ಲಿ ತೊಡಗಿಕೊಂಡರೆ, ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದರು.

ವೃತ್ತನಿರೀಕ್ಷಕ ನಯಾಜ್ ಬೇಗ್, ಉಪನಿರೀಕ್ಷಕ ಸುನಿಲ್ ಕುಮಾರ್ ರತ್ನಮಯ್ಯ, ಪ್ರತಾಪ್, ಎಎಸೈಗಳಾದ ನಾರಾಯಣಸ್ವಾಮಿ, ವೆಂಕರಮಣಪ್ಪ, ಶ್ರೀನಿವಾಸ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net